ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜ್ಞಾನ ಭವನದಲ್ಲಿ ‘ನವಕಾರ ಮಹಾಮಂತ್ರ’ ಪಠಿಸಿದರು. ಮಹಾವೀರ ಜಯಂತಿಯಂದು ಜೈನ ಧರ್ಮದ 24 ನೇ ತೀರ್ಥಂಕರರಾದ ಭಗವಾನ್ ಮಹಾವೀರರ ಜನ್ಮವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ 108 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ವಿಶೇಷ ಅಂದ್ರೆ ಕಾರ್ಯಕ್ರಮದಲ್ಲಿ ಪಾದರಕ್ಷೆ ಧರಿಸದೆ ಪ್ರಧಾನಿ ಭಾಗವಹಿಸಿದ್ದರು.

ಬೆಂಗಳೂರಿನ ನೆನಪು ಹಂಚಿಕೊಂಡ ಮೋದಿ
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನವಕಾರ ಮಹಾಮಂತ್ರದ ಆಧ್ಯಾತ್ಮಿಕ ಶಕ್ತಿಯನ್ನು ನಾನು ಇನ್ನೂ ನನ್ನೊಳಗೆ ಅನುಭವಿಸುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿ ಸಾಮೂಹಿಕ ಮಂತ್ರ ಪಠಣಕ್ಕೆ ನಾನು ಸಾಕ್ಷಿಯಾಗಿದ್ದೆ ಎಂದು ಇಂದು ನೆನಪಿಸಿಕೊಂಡಿದ್ದಾರೆ. ಆಶ್ಚರ್ಯ ಎನ್ನುವಂತೆ ಬರಿಗಾಲಿನಲ್ಲಿ ಬಂದು ಕುಳಿತ ಮೋದಿ ಈ ಮಂತ್ರ ಪಠಿಸಿದ್ದು ವಿಶೇಷವಾಗಿತ್ತು.




















