ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ನಲಿ ವಿಚಾರಣೆ ಇತ್ತು. ಆದರೆ, ನಟ ದರ್ಶನ್ ಕೋರ್ಟ್ ಗೆ ಹಾಜರಾಗಿಲ್ಲ. ಇನ್ನುಳಿದ ಆರೋಪಿಗಳು ಹಾಜರಾಗಿದ್ದಾರೆ.
ಕೋರ್ಟ್ ಷರತ್ತಿನಂತೆ ಪ್ರತಿ ತಿಂಗಳು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕು. ದರ್ಶನ್ ಬೆನ್ನು ನೋವಿನ ಕಾರಣ ನೀಡಿ ಇಂದು ಕೋರ್ಟ್ ಗೆ ಹಾಜರಾಗಿಲ್ಲ. ದರ್ಶನ್ ಪರ ವಕೀಲರು ವಿನಾಯಿತಿ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಪವಿತ್ರಾಗೌಡ ಸೇರಿದಂತೆ ಇನ್ನುಳಿದ 16 ಜನ ಆರೋಪಿಗಳು ಹಾಜರಾಗಿದ್ದಾರೆ.
ಪ್ರಕರಣದ ಆರೋಪಿ ಪವಿತ್ರಾಗೌಡ 57ನೇ ಸಿಸಿಎಚ್ ನ್ಯಾಯಾಧೀಶರ ಎದುರು ಹಾಜರಾಗಿದ್ದಾರೆ. ಅಲ್ಲದೇ, ಕೇಶವಮೂರ್ತಿ, ನಿಖಿಲ್, ಕಾರ್ತಿಕ್ ಸೇರಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಧೀಶರು ಶ್ಯೂರಿಟಿ ಸಲ್ಲಿಕೆಗೆ ಸೂಚನೆ ನೀಡಿದ್ದಾರೆ. ಆರೋಪಿಗಳ ಪರ ವಕೀಲರು, ಜಾಮೀನು ಷರತ್ತು ಸಡಿಲಿಕೆ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ತನಿಖೆ ವೇಳೆ ಸೀಜ್ ಮಾಡಿರುವ ಮೊಬೈಲ್ ಗಳನ್ನು ರಿಲೀಸ್ ಮಾಡುವಂತೆ ಪ್ರಕರಣದ ಕೆಲವು ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಧೀಶರು ಮೇ 20ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಆದರೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.


















