ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಮೊದಲ ಬಾರಿಗೆ ನಾಯಕನೊಬ್ಬ ಪಂದ್ಯವೊಂದರಲ್ಲಿ ಐದು ವಿಕೆಟ್‌ಗಳನ್ನು ಪಡೆದ ಗೌರವಕ್ಕೆ ಹಾರ್ದಿಕ್ ಪಾಂಡ್ಯ ಭಾಜನರಾಗಿದ್ದಾರೆ. ಮುಂಬೈ ಇಂಡಿಯನ್ಸ್ (MI) ತಂಡದ ನಾಯಕನಾಗಿ ಆಡುತ್ತಿರುವ ಹಾರ್ದಿಕ್, ಐಪಿಎಲ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 4-0-36-5 ರ ಅಂಕಿಅಂಶಗಳೊಂದಿಗೆ ಅನಿಲ್ ಕುಂಬ್ಳೆ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
THIRD WICKET FOR CÀPTAIN HARDIK PANDYA…!!! 🦁
— Johns. (@CricCrazyJohns) April 4, 2025
– Best bowler of MI this season. pic.twitter.com/L7DTZQsxxu
ಅನಿಲ್ ಕುಂಬ್ಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕರಾಗಿ 2009ರ ಮೇ ತಿಂಗಳಲ್ಲಿ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 4-0-16-4 ದಾಖಲೆಯನ್ನು ಹೊಂದಿದ್ದರು. ಇದೇ ರೀತಿ 2010ರಲ್ಲಿ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಚಾರ್ಜರ್ಸ್ ವಿರುದ್ಧ 3.3-0-16-4 ದಾಖಲೆಯನ್ನು ಸಹ ಹೊಂದಿದ್ದರು. ಈ ದಾಖಲೆ 16 ವರ್ಷಗಳ ಕಾಲ ಅತ್ಯುತ್ತಮ ನಾಯಕನ ಬೌಲಿಂಗ್ ಅಂಕಿಅಂಶವಾಗಿ ಮುಂದುವರಿದಿತ್ತು. ಆದರೆ ಇದೀಗ ಹಾರ್ದಿಕ್ ಪಾಂಡ್ಯ ಈ ದಾಖಲೆಯನ್ನು ಮೀರಿಸಿದ್ದಾರೆ.
ಐಪಿಎಲ್‌ನಲ್ಲಿ ನಾಲ್ಕು ವಿಕೆಟ್ ಪಡೆದ ಇತರ ನಾಯಕರಲ್ಲಿ ಜೆಪಿ ಡುಮಿನಿ, ಶೇನ್ ವಾರ್ನ್ ಮತ್ತು ಯುವರಾಜ್ ಸಿಂಗ್ ಸೇರಿದ್ದಾರೆ. ಹಾರ್ದಿಕ್ ಈ ಹಿಂದೆ ಮುಂಬೈ ಇಂಡಿಯನ್ಸ್ ನಾಯಕನಾಗಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ 4-0-31-3 ದಾಖಲೆಯೊಂದಿಗೆ ಅತ್ಯುತ್ತಮ ಅಂಕಿಅಂಶ ಹೊಂದಿದ್ದರು.
ನಾಯಕನಾಗಿ ಎರಡನೇ ಸ್ಥಾನ
ಹಾರ್ದಿಕ್ ಐಪಿಎಲ್ ನಾಯಕರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 30 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್‌ಗೆ 2008ರ ಐಪಿಎಲ್ ಗೆಲುವು ತಂದುಕೊಟ್ಟ ಶೇನ್ ವಾರ್ನ್ 57 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ (30), ರವಿಚಂದ್ರನ್ ಅಶ್ವಿನ್ (25) ಮತ್ತು ಪ್ಯಾಟ್ ಕಮಿನ್ಸ್ (21) ಈ ಪಟ್ಟಿಯಲ್ಲಿ ಮುಂದಿನ ಸ್ಥಾನಗಳಲ್ಲಿದ್ದಾರೆ.
ಐಪಿಎಲ್ ನಾಯಕರ ಅತ್ಯುತ್ತಮ ಬೌಲಿಂಗ್ ದಾಖಲೆಗಳು
- ಹಾರ್ದಿಕ್ ಪಾಂಡ್ಯ: 4-0-36-5, ಎಕಾನಮಿ 9.00, ವಿರುದ್ಧ LSG, ಲಕ್ನೋ, 4 ಏಪ್ರಿಲ್ 2025 (ಮುಂಬೈ ಇಂಡಿಯನ್ಸ್)
- ಅನಿಲ್ ಕುಂಬ್ಳೆ: 4-0-16-4, ಎಕಾನಮಿ 4.00, ವಿರುದ್ಧ ಚಾರ್ಜರ್ಸ್, ಜೋಹಾನ್ಸ್‌ಬರ್ಗ್, 24 ಮೇ 2009 (ರಾಯಲ್ ಚಾಲೆಂಜರ್ಸ್ ಬೆಂಗಳೂರು)
- ಅನಿಲ್ ಕುಂಬ್ಳೆ: 3.3-0-16-4, ಎಕಾನಮಿ 4.57, ವಿರುದ್ಧ ಚಾರ್ಜರ್ಸ್, ಡಿವೈ ಪಾಟೀಲ್, 24 ಏಪ್ರಿಲ್ 2010 (ರಾಯಲ್ ಚಾಲೆಂಜರ್ಸ್ ಬೆಂಗಳೂರು)
- ಜೆಪಿ ಡುಮಿನಿ: 3-0-17-4, ಎಕಾನಮಿ 5.66, ವಿರುದ್ಧ SRH, ವಿಶಾಖಪಟ್ಟಣಂ, 18 ಏಪ್ರಿಲ್ 2015 (ದೆಹಲಿ ಡೇರ್‌ಡೆವಿಲ್ಸ್)
- ಶೇನ್ ವಾರ್ನ್: 4-0-21-4, ಎಕಾನಮಿ 5.25, ವಿರುದ್ಧ ಚಾರ್ಜರ್ಸ್, ನಾಗ್ಪುರ, 5 ಏಪ್ರಿಲ್ 2010 (ರಾಜಸ್ಥಾನ್ ರಾಯಲ್ಸ್)
- ಯುವರಾಜ್ ಸಿಂಗ್ : 4-0-29-4, ಎಕಾನಮಿ 7.25, ವಿರುದ್ಧ ಡೇರ್‌ಡೆವಿಲ್ಸ್, ಡಿವೈ ಪಾಟೀಲ್, 17 ಏಪ್ರಿಲ್ 2011 (ಪುಣೆ ವಾರಿಯರ್ಸ್)