ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar ) ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ (GEPL) ಸೀಸನ್ 2ರಲ್ಲಿ ಮುಂಬೈ ಫ್ರಾಂಚೈಸಿಯ ಮಾಲೀಕರಾಗಿದ್ದಾರೆ. ಈ ಲೀಗ್ ವಿಶ್ವದ ಅತಿದೊಡ್ಡ ಇ-ಕ್ರಿಕೆಟ್ ಮತ್ತು ಮನರಂಜನಾ ಲೀಗ್ ಆಗಿದ್ದು, ರಿಯಲ್ ಕ್ರಿಕೆಟ್ ಎಂಬ ಆಟದ ಮೂಲಕ ಆಡಲಾಗುತ್ತದೆ. ಈ ಆಟವು 300 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ.
#Update
— @EntrepreneurInd (@EntrepreneurIND) April 2, 2025
Sara Tendulkar joined the Global e-Cricket Premier League (GEPL) as the Mumbai franchise owner, boosting the league's appeal.
GEPL, built on the popular Real Cricket game, saw rapid growth in its first season with increased player registrations and viewership. Sara's… pic.twitter.com/V3vZ5QA1ZV
ಜಿಇಪಿಎಲ್ ತನ್ನ ಮೊದಲ ಸೀಸನ್‌ನಿಂದ ಭಾರೀ ಬೆಳವಣಿಗೆ ಕಂಡಿದೆ. ಸೀಸನ್ 1ರಲ್ಲಿ 2 ಲಕ್ಷ ಆಟಗಾರರ ನೋಂದಣಿಯಾಗಿದ್ದರೆ, ಸೀಸನ್ 2ರಲ್ಲಿ ಇದು 9.1 ಲಕ್ಷಕ್ಕೆ ಏರಿದೆ. ಜಿಯೋಸಿನಿಮಾ ಮತ್ತು ಸ್ಪೋರ್ಟ್ಸ್ 18ರಲ್ಲಿ 24 ಲಕ್ಷಕ್ಕೂ ಹೆಚ್ಚು ನಿಮಿಷಗಳ ಸ್ಟ್ರೀಮಿಂಗ್ ಮತ್ತು 70 ಮಿಲಿಯನ್‌ಗಿಂತ ಹೆಚ್ಚು ಮಲ್ಟಿಪ್ಲಾಟ್‌ಫಾರ್ಮ್ ರೀಚ್‌ನೊಂದಿಗೆ, GEPL ಕ್ರಿಕೆಟ್ ಇ-ಸ್ಪೋರ್ಟ್ಸ್‌ನಲ್ಲಿ ಮುಂಚೂಣಿಯಲ್ಲಿದೆ.
ಸಾರಾ ತೆಂಡೂಲ್ಕರ್ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿ, “ಕ್ರಿಕೆಟ್ ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿದೆ. ಇ-ಸ್ಪೋರ್ಟ್ಸ್‌ನಲ್ಲಿ ಅದರ ಸಾಮರ್ಥ್ಯವನ್ನು ಕಂಡುಕೊಳ್ಳುವುದು ರೋಮಾಂಚಕ. ಜಿಇಪಿಎಲ್ನಲ್ಲಿ ಮುಂಬೈ ಫ್ರಾಂಚೈಸಿಯ ಮಾಲೀಕತ್ವ ಪಡೆಯುವುದು ನನ್ನ ಕನಸಾಗಿತ್ತು ಹಾಗೂ ಈಗ ನನಸಾಗಿದೆ. ಆಟದ ಮೇಲಿನ ನನ್ನ ಒಲವನ್ನು ಮತ್ತು ನಗರದ ಮೇಲಿನ ಪ್ರೀತಿಯ ದ್ಯೋತಕ,” ಎಂದು ಹೇಳಿದರು.
ಸಾರಾ ಅವರ ಮುಂಬೈ ಫ್ರಾಂಚೈಸಿ ಮಾಲೀಕತ್ವವು ಮಹಾನಗರದೊಂದಿಗೆ ಅವರ ಆಳವಾದ ಅಭಿಮಾನವನ್ನು ಪ್ರತಿಬಿಂಬಿಸುತ್ತದೆ ಎಂದು ಜೆಟ್‌ಸಿಂಥೆಸಿಸ್‌ನ ಸಿಇಒ ಮತ್ತು ಸಂಸ್ಥಾಪಕ ರಾಜನ್ ನವಾನಿ ಹೇಳಿದ್ದಾರೆ. ಮುಂದುವರಿದ ಅವರು “ಸಾರಾ ತೆಂಡೂಲ್ಕರ್ ಅವರನ್ನು ಮುಂಬೈ ತಂಡದ ಮಾಲೀಕರಾಗಿ ಸ್ವಾಗತಿಸಲು ನಾವು ರೋಮಾಂಚಿತರಾಗಿದ್ದೇವೆ. ಸಾರಾ ಭಾರತದಲ್ಲಿ ಹೊಸ ಪೀಳಿಗೆಯ ನೈಜ ಪ್ರತಿನಿಧಿಯಾಗಿದ್ದಾರೆ,” ಎಂದು ಹೇಳಿದರು.
ಜಿಇಪಿಎಲ್ ಸೀಸನ್ 2 ಮೇ 2025ರಲ್ಲಿ ಫೈನಲ್‌ನೊಂದಿಗೆ ಕೊನೆಗೊಳ್ಳಲಿದ್ದು, ತಂಡಗಳು ‘ಇ-ಕ್ರಿಕೆಟ್ ಐಕಾನ್’ ಎಂಬ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಸಾರಾ ಅವರ ಪ್ರವೇಶದೊಂದಿಗೆ, GEPL ಕ್ರಿಕೆಟ್ ಇ-ಸ್ಪೋರ್ಟ್ಸ್‌ನ ಭವಿಷ್ಯವನ್ನು ಮರುರೂಪಿಸಲು ಸಿದ್ಧವಾಗಿದೆ.