ಬೆಂಗಳೂರು: ರಾಜ್ಯ ಸರ್ಕಾರದ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್)ಯಲ್ಲಿ (KITS Recruitment 2025) ಅಸಿಸ್ಟಂಟ್ ಮ್ಯಾನೇಜರ್ ಹುದ್ದೆ ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯು ಘೋಷಿಸಿರುವ ಕಾರ್ಯನೀತಿಗಳು ಹಾಗೂ ಪ್ರೋತ್ಸಾಹಕಗಳನ್ನು ಪ್ರಚಾರ ಮಾಡುವುದು ಸೇರಿ ಹಲವು ಜವಾಬ್ದಾರಿ ಇರುವ ಹುದ್ದೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ನಿಪುಣ ಕರ್ನಾಟಕ ಮತ್ತು ಇತರ ಉಪಕ್ರಮಗಳ ಅನುಷ್ಠಾನಕ್ಕಾಗಿ ಕಿಟ್ಸ್ – ಐಟಿ ಕೋಶಕ್ಕೆ ಬೆಂಬಲ ನೀಡುವುದು. ಕೆ-ಟೆಕ್ ಭಾಗಿದಾರರೊಂದಿಗೆ ಸಮನ್ವಯ ನಡೆಸಿ ಬೆಂಗಳೂರಿನ ಹೊರಗಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಹಾಯ ಮಾಡುವುದು. ಕಿಟ್ಸ್ – ಐಟಿ ಕೋಶದಲ್ಲಿ ಪ್ರಧಾನ ವ್ಯವಸ್ಥಾಪಕರ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆ ಮೇರೆಗೆ ಇತರೆ ಜವಾಬ್ದಾರಿ ವಹಿಸುವುದು ಅಸಿಸ್ಟಂಟ್ ಮ್ಯಾನೇಜರ್ ಜವಾಬ್ದಾರಿಗಳಾಗಿವೆ.
ಅರ್ಹತೆಗಳು ಏನು?
ಪೂರ್ಣ ಅವಧಿಯ ಎಂ.ಬಿಎ ಅಥವಾ ಪಿ.ಜಿ.ಡಿ.ಎಂ ಅಥವಾ ಪಿ.ಜಿ.ಡಿ.ಬಿಎ ಅಥವಾ ಬಿಇ, ಬಿಕಾಂ, ಬಿಎಸ್ಸಿ, ಎಂ.ಕಾಂ, ಎಂ.ಎಸ್ಸಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಹಾಗೆಯೇ, ಐಟಿ, ಟಿಇಎಸ್ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಉತ್ತಮ ಸಂವಹನ ಕೌಶಲ್ ಹೊಂದಿರಬೇಕು. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅರ್ಜಿ ಸಲ್ಲಿಸಲು ಅರ್ಹರು ಎಂದು ಕಿಟ್ಸ್ ತಿಳಿಸಿದೆ.
ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಯು ಗುತ್ತಿಗೆ ಆಧಾರಿತವಾಗಿದೆ. 11 ತಿಂಗಳ ಅವಧಿಗೆ ಈಗ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಉದ್ಯೋಗಿಯ ಕೆಲಸದ ದಕ್ಷತೆ, ಆಡಳಿತ ಮಂಡಳಿಯ ನಿರ್ಧಾರ ಆಧರಿಸಿ ಅವಧಿಯನ್ನು ವಿಸ್ತರಣೆ ಮಾಡುವ ಸಾಧ್ಯತೆಗಳು ಕೂಡ ಇರುತ್ತವೆ.
ಅಭ್ಯರ್ಥಿಗಳು https://eitbt.karnataka.gov.in ವೆಬ್ ಪೋರ್ಟ್ಲಲ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ತಮ್ಮ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರದೊಂದಿಗೆ ಇತ್ತೀಚಿನ ವಿವರಗಳನ್ನು ದಿನಾಂಕ 15ನೇ ಏಪ್ರಿಲ್ 2025ರ ಸಂಜೆ 5 ಗಂಟೆ ಅಥವಾ ಅದಕ್ಕೂ ಮುಂಚಿತವಾಗಿ [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಆಫ್ ಲೈನ್ ಮೂಲಕ ಆದರೆ, ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಬಿಕೆಚಿ ಸಫೈರ್, # 59, ರೈಲ್ವೆ ಪ್ಯಾರಲೆಲ್ ರೋಡ್, ಕುಮಾರ ಪಾರ್ಕ್ ವೆಸ್ಟ್, ಶೇಷಾದ್ರಿಪುರಂ, ಬೆಂಗಳೂರು – 560020 ವಿಳಾಸಕ್ಕೂ ಕಳುಹಿಸಬಹುದು.