ಬಳ್ಳಾರಿ: ನಗರದಲ್ಲಿರುವ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ (Bellary Medical College) ಮತ್ತು ಸಂಶೋಧನಾ ಕೇಂದ್ರ (Research Centre)ದಲ್ಲಿ 102 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಹಾಗೂ ಇತರೆ ಬೋಧಕೇತರ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಲಾಗಿದ್ದು, ನೇರ ಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಬೋಧಕ ಉದ್ಯೋಗಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಂದರ್ಶನಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಈ ಕೆಲಸಗಳಿಗೆ ಸೇರಲು ಬಯಸುವವರು ತಮ್ಮ ತಮ್ಮ ವಿದ್ಯಾರ್ಹತೆಯ ದಾಖಲೆಗಳ ಮೂಲ ಪ್ರತಿ, ಇತ್ತೀಚಿನ 2 ಪಾಸ್ ಪೋರ್ಟ್ ಸೈಜ್ ಫೋಟೋ, ಒಂದು ಸಾವಿರ ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಏಪ್ರಿಲ್ 2ರಂದು ಸಂದರ್ಶನ ನಡೆಯಲಿದೆ.
ಅರ್ಜಿ ಶುಲ್ಕವನ್ನು ನಿರ್ದೇಶಕರು, ಬಿಎಂಸಿಆರ್ಸಿ, ಬಳ್ಳಾರಿ, ಇವರ ಹೆಸರಲ್ಲಿ ಮೊದಲು ಡಿಡಿ ತೆಗೆಯಬೇಕು. 2 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನವು ಆಡಳಿತ ಕಚೇರಿ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್ಸಿ), ಬಳ್ಳಾರಿಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ https://bmcrcballari.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.
ಯಾವ ವಿಭಾಗದಲ್ಲಿ ನೇಮಕ?
ರೇಡಿಯೋ ಡಯಾಗ್ನೋಸಿಸ್, ಟಿಬಿ ಆ್ಯಂಡ್ ಸಿಡಿ, ಪ್ಲಾಸ್ಟಿಕ್ ಸರ್ಜರಿ, ಪೀಡಿಯಾಟ್ರಿಕ್ಸ್ ಸರ್ಜರಿ, ಸೈಕಿಯಾಟ್ರಿ, ನೆಫ್ರೋಲಜಿ, ಮೆಡಿಕಲ್ ಗ್ಯಾಸ್ಟ್ರೋಲಜಿ, ಜೆನೆರಲ್ ಮೆಡಿಷನ್, ಜೆನೆರಲ್ ಸರ್ಜರಿ, ಆರ್ಥೋಪೆಡಿಕ್, ಒಬಿಜಿ, ಯುರೋಲಜಿ, ಅನಸ್ತೇಷಿಯಾಲಜಿ, ರೇಡಿಯೋಥೆರಪಿ, ಎಂಡೊಕ್ರೈನಾಲಜಿ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗಳ ವಿವರ ಹೀಗಿದೆ…
ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಸೀನಿಯರ್ ರೆಸಿಡೆಂಟ್- 48
ಪ್ರಾಧ್ಯಾಪಕರು- 06
ಸಹ ಪ್ರಾಧ್ಯಾಪಕರು- 22
ಸಹಾಯಕ ಪ್ರಾಧ್ಯಾಪಕರು- 22
ಇತರೆ- 04