ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆಯಾಗಿರುವ ವಿಚಾರ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಯತ್ನಾಳ್ ಉಚ್ಛಾಟನೆಗೆ ಹೈಕಮಾಂಡ್ ನಾಯಕರ ಬಳಿಯಿದೆ ಸಾಲು ಸಾಲು ಕಾರಣಗಳು. ಹೈಕಮಾಂಡ್ ನಾಯಕರು ಈ ಕಾರಣಗಳನ್ನು ಮುಂದಿಟ್ಟುಕೊಂಡೇ ಯತ್ನಾಳ್‌ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಯತ್ನಾಳ್ ಉಚ್ಚಾಟನೆಯ ಹಿಂದಿನ ಕಾರಣಗಳನ್ನು “ಕರ್ನಾಟಕ ನ್ಯೂಸ್ ಬೀಟ್” ರಿವೀಲ್ ಮಾಡ್ತಾಯಿದೆ
ಹಾಗಾದ್ರೆ ಯತ್ನಾಳ್ ಉಚ್ಛಾಟನೆಗೆ ಕಾರಣವಾದ ಅಂಶಗಳೇನು?
- ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರದ ಶಿಸ್ತು ಸಮಿತಿ ಕೊಟ್ಟಿದ್ದ ನೋಟಿಸ್‌ಗೆ ಡೋಂಟ್ ಕೇರ್ ಮನೋಭಾವ.
- ರಾಜ್ಯದಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪರ ವಿರುದ್ಧ ಬಹಿರಂಗ ಹೇಳಿಕೆಗಳು.
- ಮಾಧ್ಯಮಗಳ ಮುಂದೆ ಅಪ್ಪ ಮಗ ಎಂದು ಉಲ್ಲೇಖಿಸಿ ವಾಗ್ದಾಳಿ ಮಾಡುತ್ತಿದ್ದದ್ದು.
- ರಾಜ್ಯ ವಿವಿಧ ನಾಯಕರುಗಳು ಯಡಿಯೂರಪ್ಪ ಹಾಗೂ ಅವರ ಕುಟುಂಬದ ಜೊತೆಗೆ ನಿಕಟ ಸಂಪರ್ಕ, ಸಂಬಂಧ ಇಟ್ಟುಕೊಂಡ್ರೆ, ಅವರನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿರುವುದು.
- ಪಕ್ಷದ ಚೌಕಟ್ಟಿನ ರಾಜ್ಯ ಘಟಕದಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ದನಿಗೂಡಿಸದೇ ತಾತ್ಸರದ ಪ್ರವೃತ್ತಿ ಬೆಳೆಸಿಕೊಂಡಿದ್ದು.
- ಪ್ರತ್ಯೇಕ ಬಣ ಕಟ್ಟಿಕೊಂಡು ಹಾಲಿ ರಾಜ್ಯಾಧ್ಯಕ್ಷರ ವರ್ಚಸ್ಸು ಕುಂದಿಸುವ ಕೆಲಸ ಮಾಡುತ್ತಿದ್ದದ್ದು.
- ಪಕ್ಷ ಹೋರಾಟ, ಪ್ರತಿಭಟನೆ ಎಂದರೆ ಅದರಿಂದ ಅಂತರ ಕಾಯ್ದುಕೊಂಡದ್ದು.
- ನನಗೆ ಹೈಕಮಾಂಡ್ ನಾಯಕರ ಶ್ರೀರಕ್ಷೆ ಇದೆ ಎಂಬ ಮಾತನ್ನು ಹೇಳುತ್ತಾ, ಹೈಕಮಾಂಡ್ ನಾಯಕರ ಮನಸ್ಸಿಗೂ ಘಾಸಿಯುಂಟು ಮಾಡಿದ್ದು. ಜೊತೆಗೆ ಸೂತ್ರಧಾರನ ಮಾತು ನಾನು ಕೇಳುತ್ತಿದ್ದೇನೆ. ಆ ಸೂತ್ರಧಾರ ಯಾರೆಂಬುದು ಬಹಿರಂಗಪಡಿಸದೇ ಇಷ್ಟು ದಿನಗಳ ಕಾಲ ಹೇಳಿಕೆ ನೀಡಿದ್ದು.
- ನಾನು ಮಾತ್ರವೇ ಸರ್ವೋಚ್ಛ ನಾಯಕ. ಕ್ಲೀನ್ ಹ್ಯಾಂಡ್ ಪೊಲಿಟಿಷಿಯನ್ ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದದ್ದು.
- ಇದೆಲ್ಲದಕ್ಕಿಂತ ಮಿಗಿಲಾಗಿ 2 ಸಾವಿರ ಕೋಟಿ ರೂಪಾಯಿ ನಮ್ಮ ಹೈಕಮಾಂಡ್ ನಾಯಕರಿಗೆ ತಲುಪಿಸಿದ್ರೆ, ಇಲ್ಲಿ ಯಾರೂ ಬೇಕಾದ್ರೂ ಮುಖ್ಯಮಂತ್ರಿ ಗಾದಿಗೇರಬಹುದು ಎಂಬ ಹೇಳಿಕೆಯಿಂದ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದು.
ಹೀಗೆ ಸಾಲು ಸಾಲು ಕಾರಣಗಳನ್ನು ಅರಿತಿದ್ದ ಬಿಜೆಪಿ ಹೈಕಮಾಂಡ್ ನಾಯಕರು, ಕೇಂದ್ರ ಬಿಜೆಪಿಯ ಶಿಸ್ತು ಸಮಿತಿಯ ವತಿಯಿಂದ ಫೆಬ್ರವರಿ 10 ರಂದು ಶೋಕಾಸ್ ನೋಟಿಸ್ ನೀಡಿತ್ತು. ಅದಕ್ಕೆ ಯಾವುದೇ ಉತ್ತರ ನೀಡದೇ ಡೊಂಟ್ ಕೇರ್ ಮನೋಭಾವ ತೋರಿದ್ದ ಯತ್ನಾಳ್‌ಗೆ ಹೈಕಮಾಂಡ್ ನಾಯಕರು ಗೇಟ್‌ಪಾಸ್ ಕೊಟ್ಟಿದ್ದಾರೆ ಎಂಬುದಿಲ್ಲಿ ಸಾಬೀತಾಗಿದೆ.