ಉಡುಪಿ: ದೇವರೇ ಪಾಸಾಗುವಷ್ಟು ಮಾತ್ರ ಅಂಕಗಳನ್ನು ಕೊಟ್ಟು ಕಾಪಾಡು ಎಂದು ವಿದ್ಯಾರ್ಥಿಯೋರ್ವ ದೇವರಿಗೆ ಪತ್ರ ಬರೆದು ಪ್ರಾರ್ಥಿಸಿರುವ ಸುದ್ದಿ ವೈರಲ್ ಆಗಿದೆ.
ಪಾಸಾಗುವಷ್ಟು ಮಾತ್ರ ಅಂಕ ಕೇಳಿ ಕಾಪಾಡು ದೇವರೇ ಎಂದು ವಿದ್ಯಾರ್ಥಿ ದೇವರಿಗೆ ಪತ್ರ ಬರೆದಿದ್ದಾನೆ. ಈ ವಿಚಿತ್ರ ಪತ್ರ ಕುಂದಾಪುರದ ಹೊಳಮಗ್ಗಿ ಹೊರಬೊಬ್ವರ್ಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದೆ.
ಈಗ ವಿದ್ಯಾರ್ಥಿಯ ಬೇಡಿಕೆಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪರೀಕ್ಷೆಯಲ್ಲಿ ನನಗೆ ಇಷ್ಟು ಅಂಕ ಇರಬೇಕು. ದೇವರೇ ಹೊರಬೊಬ್ಬರ್ಯ ಎಂದು ಬರೆದಿರುವ ವಿದ್ಯಾರ್ಥಿ, ಯಾವ ವಿಷಯಕ್ಕೆ ಎಷ್ಟು ಅಂಕ ಬೇಕು ಎನ್ನುವುದರ ಬಗ್ಗೆಯೂ ಬರೆದಿದ್ದಾನೆ.
ಗಣಿತ -39, 38, 37, 36
ಇಂಗ್ಲಿಷ್- 39, 38, 37
ಕನ್ನಡ- 40, 39
ವಿಜ್ಞಾನ -39, 38
ಹಿಂದಿ – 40,39
ಸಮಾಜ- 38, 37
ದೇವರೇ ಇದಕ್ಕಿಂತಲೂ ನನಗೆ ಕಡಿಮೆ ಅಂಕ ಬೇಡ. ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಇರಬೇಕು ಎಂದು ಪ್ರಾರ್ಥಿಸಿದ್ದಾನೆ.