ಬೆಂಗಳೂರು: ಬಿಬಿಎಂಪಿ ಬಜೆಟ್ ಮಂಡಿಸುವುದಕ್ಕೆ ಮತ್ತೆ ವಿಘ್ನ ಶುರುವಾಗಿದೆ.
ಈ ಬಾರಿಯೂ ಬಜೆಟ್ ಮಂಡಿಸುವ ದಿನಾಂಕವನ್ನು ಮತ್ತೆ ಬದಲಾವಣೆ ಮಾಡಲಾಗಿದೆ. ಇಲ್ಲಿಯವರೆಗೆ ಶುಕ್ರವಾರ ಬಜೆಟ್ ಮಂಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಇದಕ್ಕೆ ತಯಾರಿ ಕೂಡ ನಡೆದಿತ್ತು. ಬಿಬಿಎಂಪಿಯ ಎಲ್ಲ ಅಧಿಕಾರಿಗಳ ಸಭೆ ನಡೆಸಿ, ತೀರ್ಮಾನ ಕೂಡ ಕೈಗೊಳ್ಳಲಾಗಿತ್ತು.
ಆದರೆ, ಈಗ ಮತ್ತೆ ಬಜೆಟ್ ಮಂಡಿಸುವ ದಿನಾಂಕವನ್ನು ಅಧಿಕಾರಿಗಳು ಮುಂದೂಡಿದ್ದಾರೆ. ಅಮಾವಾಸ್ಯೆ ದಿನದಂದು ಬಜೆಟ್ ಮಂಡಿಸಲು ದಿನಾಂಕ ಫಿಕ್ಸ್ ಮಾಡಲಾಗಿದೆ. ಹೀಗಾಗಿ ಶನಿವಾರ(ಮಾ. 29) ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.