ಬೆಂಗಳೂರು: ಇತ್ತೀಚೆಗೆ ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ರಾಸಾಯನಿಕ ಅಂಶಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಹೋಟೆಲ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಅಸುರಕ್ಷಿತ ಆಹಾರ ತಯಾರಿಸುವ ಹೋಟೆಲ್ ಗಳ ಮೇಲೆ ದಾಳಿ ನಡೆಸುತ್ತಿರುವ ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸುತ್ತಿದ್ದಾರೆ. ಇಂದು ಕೂಡ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಇಲಿಗಳು ಮತ್ತು ಜಿರಳೆಗಳು ಸೇರಿದಂತೆ ಕೀಟ ನಿಯಂತ್ರಣ ಕ್ರಮಗಳ ತಪಾಸಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ.
ಇಂದು ರಾಜ್ಯಾದ್ಯಂತ 479 ಹೋಟೆಲ್ ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ 174 ಅನೈರ್ಮಲ್ಯದೊಂದಿಗೆ ಆಹಾರ ತಯಾರಿಸುವ ಹೋಟೆಲ್ ಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಹೋಟೆಲ್ ಗಳ ಮೇಲೆ ದಂಡ ವಿಧಿಸಲಾಗಿದೆ. 174 ಅನೈರ್ಮಲ್ಯ ಹೋಟೆಲ್ ಗಳಿಗೆ 62,000 ರೂ. ದಂಡ ಹಾಕಿ, ತಪಾಸಣೆ ಮುಂದುವರೆಸಲಾಗಿದೆ.