ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಟ್ರೈಲರ್ ರಿಲೀಸ್ ಬಿಡುಗಡೆ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಮನದ ಕಡಲಿನಲ್ಲಿನ ಹಲವು ವಿಷಯಗಳನ್ನು ತೇಲಿ ಬಿಟ್ಟಿದ್ದಾರೆ.
ಈ ವೇಳೆ ಯಶ್ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದಾರೆ. ಸೀರಿಯಲ್ ನಲ್ಲಿ ನಟಿಸುತ್ತಿದ್ದ ವೇಳೆ ಸಾಕಷ್ಟು ಆಫರ್ ಬರುತ್ತಿದ್ದವು. ಸ್ಟೋರಿ ಕೇಳಿದರೆ ಮಾತ್ರ ಕೊಬ್ಬು ಅಂತಿದ್ದರು. ನನಗೆ ನಂಬಿಕೆ ಇಲ್ಲದೆ ಹೇಗೆ ಕೆಲಸ ಮಾಡಲು ಸಾಧ್ಯ? ಯಾವುದೋ ಸಿನಿಮಾದಲ್ಲಿ ಅವಕಾಶ ಬಂತು. ಒಬ್ಬರು ಮ್ಯಾನೇಜರ್ ನನಗೆ ಹೇಳಿ ಕಳಿಸಿದರು. ನಾನು ಹೋಗಿದ್ದೆ, ಕೆಳಗೆ ಕಾಯುತ್ತಿದ್ದ ಅವರು ನಿಮಗಾಗಿ ಕಾಯುತ್ತಿದ್ದೆವು ಎಂದರು. ಮೇಲೆ ಹತ್ತಿ ರೂಮ್ ಒಳಗೆ ಹೋದ ತಕ್ಷಣ ಯಾರು ಏನು ಬೇಕಾಗಿತ್ತು ಎಂದರು. ಫೋಟೋ ಇದ್ಯಾ ಅಂದ್ರು. ಹೀರೋ ಆಗ್ಬೇಕಂತಿಯಾ, ಫೋಟೋ ಇಲ್ವಾ ಎಂದು ಕೇಳಿದರು. ಕಥೆ ಕೇಳಿದ್ದಕ್ಕೆ ಕಥೆ ಹೇಳಿಲ್ಲ, ಬಿಟ್ಟು ಬಂದೆ ಎಂದು ಹಳೆಯ ನೆನಪು ಮೆಲುಕು ಹಾಕಿದ್ದಾರೆ.
ಮೊಗ್ಗಿನ ಮನಸು ಸಿನಿಮಾ ಅನೌನ್ಸ್ ಆಯ್ತು. ರಾಧಿಕಾ ನಟಿಸ್ತಿರೋದು ಗೊತ್ತಿತ್ತು. ನಾನು ಅವರಿಗೆ ಕಾಲ್ ಮಾಡಿ ಗುಡ್ ಲಕ್ ಅಂದಿದ್ದೆ. ಲಾಸ್ಟ್ ಶೆಡ್ಯೂಲ್ ಇತ್ತು. ನನಗೆ ಕಾಲ್ ಬಂತು. ಮೊದಲಿಗೆ ನೆಗ್ಲೆಕ್ಟ್ ಮಾಡಿದೆ. ಸಿನಿಮಾ ಮುಗಿತಾ ಬಂತು. ಹೀಗಿದ್ದಾಗ ನನಗೆ ಯಾಕೆ ಕಾಲ್ ಎಂದುಕೊಂಡೆ. ರಾಧಿಕಾಗೆ ಕಾಲ್ ಮಾಡಿ ಕೇಳಿದೆ. ಅಲ್ಲಿ ನಟಿಸಬೇಕಾದವರಿಗೆ ಕಾಲಿಗೆ ಏಟಾಗಿತ್ತು. ಅವರ ಪಾತ್ರದಲ್ಲಿ ನಾನು ನಟಿಸಬೇಕಾಗಿತ್ತು. ಮುಂಗಾರು ಮಳೆ ತೆಗೆದ ನಿರ್ಮಾಪಕರು ಅಲ್ಲಿದ್ದರು. ನಾನು ಹೋಗುತ್ತಿದ್ದಂತೆ ಅವರು ನನ್ನ ಗುರುತಿಸಿ ಸೀರಿಯಲ್ ಚೆನ್ನಾಗಿದೆ ಅಂದ್ರು. ಅವರು ನಡೆದುಕೊಂಡ ರೀತಿ ಖುಷಿ ನೀಡಿತು ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.