ಹುಬ್ಬಳ್ಳಿ: ಹನಿಟ್ರ್ಯಾಪ್ ವಿಷಯ ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಚರ್ಚೆಯಾಗುತ್ತಿರುವುದುಕ್ಕೆ ಸಚಿವ ಸಂತೋಷ್ ಲಾಡ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣ ವಿಚಾರದಲ್ಲಿ ಬಿಜೆಪಿಯು ಟಿವಿಯಲ್ಲಿ ಪ್ರಚಾರ ಪಡೆಯಲು ಹೋರಾಟ ನಡೆಸುತ್ತಿತ್ತು. ಬಿಜೆಪಿ ನಾಯಕರು ಯಾವ ಕಾರಣಕ್ಕೆ ಅಮಾನತು ಆದರೂ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಬಿಜೆಪಿ ಅವರು ಹನಿಟ್ರ್ಯಾಪ್ ವಿಷಯವನ್ನು ಪ್ರಮುಖವಾಗಿ ತೆಗೆದುಕೊಳ್ಳುವಂತೆ ಹೇಳಿ ಬಿಜೆಪಿ ಹೋರಾಟ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ತನಿಖೆ ಬಗ್ಗೆ ತಿಳಿಸಿದ್ದಾರೆ. ಆದರೆ, ಅವರಿಗೆ ಉತ್ತರ ಕೇಳುವ ವ್ಯವದಾನ ಇರಲಿಲ್ಲ. ಮಾಧ್ಯಮದಲ್ಲಿ ಮಿಂಚಬೇಕಿತ್ತು. ಅದಕ್ಕೆ ಮಾಡಬಾರದ್ದು ಮಾಡಿ ಅಮಾನತು ಆದರು ಎಂದಿದ್ದಾರೆ.
ಹನಿಟ್ರ್ಯಾಪ್ ಬಗ್ಗೆ ಅವಸರ ಏನಿದೆ? ಈ ಪ್ರಕರಣ ಬಗ್ಗೆ ಕಾಂಗ್ರೆಸ್‌ನವರಿಗೆ ಮಾತ್ರವಲ್ಲದೇ ಬಿಜೆಪಿ ಸೇರಿದಂತೆ ಎಲ್ಲ ನಾಯಕರಲ್ಲೂ ಬೇಸರ ಇದೆ. ಈಗಾಗಲೇ ಸರ್ಕಾರ ಉತ್ತರ ನೀಡಿದೆ. ಸರ್ಕಾರವೇ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಸಿದ್ದವಿದೆ ಎಂದಿದ್ದಾರೆ.
ಜಪಾನ್ ದೇಶ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಭೂಮಿಯಿಂದ ಆಕಾಶಕ್ಕೆ ಹೋಗುವುದು. ಚಂದ್ರನಿಂದ ಮಂಗಳ ಗೃಹ ಹಾಗೂ ಮಂಗಳಿನಿಂದ ಚಂದ್ರನಲ್ಲಿಗೆ ಬರುವ ಕುರಿತು ಚರ್ಚೆಯಾಗುತ್ತಿದ್ದರೆ, ನಮ್ಮಲ್ಲಿ ಮಾತ್ರ ಹನಿಟ್ರ್ಯಾಪ್ ಕುರಿತು ಚರ್ಚೆಯಾಗುತ್ತಿರುವುದು ದುರಂತವೇ ಸರಿ ಎಂದಿದ್ದಾರೆ.