ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಗೌತಮ್ ವಾಸುದೇವ್ ಮೆನನ್ (Gautham Vasudev Menon) ಕನ್ನಡಕ್ಕೂ ಕಾಲಿಡಲು ಸಜ್ಜಾಗಿದ್ದಾರೆ.
ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡುವ ವಿಚಾರವನ್ನು ಈಗ ರಿವೀಲ್ ಮಾಡಿದ್ದಾರೆ. ನಾನು ಕನ್ನಡ ಸಿನಿಮಾ ಮಾಡುವ ಆಲೋಚನೆ ಹೊಂದಿದ್ದೇನೆ. ದೊಡ್ಡ ಸಿನಿಮಾ ನಿರ್ಮಿಸುವ ಪ್ಲ್ಯಾನ್‌ಯಿದೆ ಎಂದಿದ್ದಾರೆ. ದಕ್ಷಿಣದ ಜೊತೆಗೆ ಬಾಲಿವುಡ್‌ನಲ್ಲೂ ನಾನು ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದೇನೆ. ನಾನು ಯಾವಾಗಲೂ ಭಾಷೆಯ ಗಡಿ ದಾಟಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಕನ್ನಡ ನಾನು ಮಾತನಾಡುವ ಭಾಷೆಯಲ್ಲ. ಆದರೆ ನನಗೆ ಗೊತ್ತಿಲ್ಲದ ಭಾಷೆಯಲ್ಲಿ ಸಿನಿಮಾ ಮಾಡುವ ಸವಾಲನ್ನು ಸ್ವೀಕರಿಸಲು ರೆಡಿಯಾಗಿದ್ದೇನೆ ಎಂದಿದ್ದಾರೆ.