ಹಾಸನ: ಖಾಸಗಿ ಶಾಲೆಯ (School) ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ (Honey Bees Attack) ನಡೆಸಿದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸಕಲೇಶಪುರ (Sakleshpura) ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಹೆಜ್ಜೇನು ದಾಳಿಯಿಂದಾಗಿ 9 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ರೋಟರಿ ಶಾಲೆಯ ಸಿಬ್ಬಂದಿ ಶಾಲೆ ಮುಗಿಸಿಕೊಂಡು, ಮನೆಗೆ ತೆರಳುವಾಗ ಹೆಜ್ಜೇನು ದಾಳಿ ಮಾಡಿದೆ. ಶಾಲೆಯ ಎದುರಿಗೆ ಇರುವ ಮನೆಯ ಮುಂದೆ ನಿಂತಿದ್ದ ವರ್ಗಿಸ್ ಎಂಬುವವರ ಮೇಲೆಯೂ ದಾಳಿ ನಡೆಸಿವೆ.
ಹೆಜ್ಜೆನು ದಾಳಿಯಿಂದಾಗಿ ಕೋಮಲ ಎಂಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಭಾಸ್ಕರ್, ಸೋಮಶೇಖರ್, ರವಿ, ಚೈತನ್ಯ, ಸಂಜಯ್, ಅಕ್ಷಯ್ ಮತ್ತು ವಿಶ್ವನಾಥ್ ಹೆಜ್ಜೇನು ದಾಳಿಯಿಂದ ಗಾಯಗೊಂಡಿದ್ದು ಸಕಲೇಶಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.