ಕರ್ನಾಟಕ ರತ್ನ, ಕರ್ನಾಟಕದ ಯುವರತ್ನ, ಅಭಿಮಾನಿಗಳ ಪಾಲಿನ ಪರಮಾತ್ಮನ 50ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ 2002ರಲ್ಲಿ ಪುನೀತ್ ರಾಜ್‌ಕುಮಾರ್ ರನ್ನು ಪವರ್‌ಸ್ಟಾರ್ ಮಾಡಿದ ಸಿನಿಮಾ ಅಪ್ಪು ಮರು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರ ಸುಮಾರು 100ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು.
ಬಿಡುಗಡೆಯಾಗಿರುವ ಪ್ರತಿಯೊಂದು ಸ್ಕ್ರೀನ್ ನಲ್ಲಿಯೂ ಅಪ್ಪು ಭರ್ಜರಿ ಪ್ರದರ್ಶನ ಕಂಡಿದೆ. ಮೊದಲ ನಾಲ್ಕು ದಿನ ಪುನೀತ್ ಅಭಿಮಾನಿಗಳು ‘ಅಪ್ಪು’ ನೋಡುವುದಕ್ಕೆ ಥಿಯೇಟರ್‌ಗಳಿಗೆ ನುಗ್ಗಿದ್ದರು. ಹೀಗಾಗಿ ನಾಲ್ಕು ದಿನ ಅಪ್ಪು ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈಗ ಮೊದಲ ವಾರ ‘ಅಪ್ಪು’ ಕಲೆಕ್ಷನ್ ಏನು? ಎಂಬುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಒಂದು ವಾರದಲ್ಲಿ ಅಪ್ಪು ಸಿನಿಮಾ ಗಳಿಸಿದ್ದೆಷ್ಟು?
ಅಪ್ಪು ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿ 1.50 ರಿಂದ 1.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಆಕ್ಷನ್, ಡ್ಯಾನ್ಸ್ ವಿಷಯದಲ್ಲಿ ಅಪ್ಪು ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದ ಸಿನಿಮಾ. ಪುನೀತ್ ರಾಜ್‌ಕುಮಾರ್ ರಿಯಲ್ ಸ್ಟಂಟ್‌ಗಳನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದರು. ಪುರಿ ಜಗನ್ನಾಥ್ ನಿರ್ದೇಶನ, ಹಾಡುಗಳು, ಪುನೀತ್ ಆಕ್ಷನ್, ಡ್ಯಾನ್ಸ್ ಎಲ್ಲವೂ ಪ್ರೇಕ್ಷಕರನ್ನು ಸೆಳೆದಿತ್ತು.
ಯಾವ ದಿನ ಎಷ್ಟು ಕಲೆಕ್ಷನ್?
ಮೊದಲ ದಿನ 60 ಲಕ್ಷ ರೂ. (ಅಂದಾಜು)
2ನೇ ದಿನ 35 ಲಕ್ಷ ರೂ. (ಅಂದಾಜು)
3ನೇ ದಿನ 25 ಲಕ್ಷ ರೂ. (ಅಂದಾಜು)
4ನೇ ದಿನ 20 ಲಕ್ಷ ರೂ. (ಅಂದಾಜು)
5ನೇ ದಿನ 10 ಲಕ್ಷ ರೂ. (ಅಂದಾಜು)
6ನೇ ದಿನ 5 ಲಕ್ಷ ರೂ. (ಅಂದಾಜು)
7ನೇ ದಿನ 4 ಲಕ್ಷ ರೂ. (ಅಂದಾಜು)
ಒಟ್ಟು 1.59 ಕೋಟಿ ರೂ.(ಅಂದಾಜು)
ಹೊಸ ಸಿನಿಮಾಗಳು ಬಿಡುಗಡೆಯಾಗಿ ಕಲೆಕ್ಷನ್ ಇಲ್ಲದೆ ಒದ್ದಾಡುತ್ತಿದ್ದ ವೇಳೆ ಅಪ್ಪು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿದ್ದು, ಸ್ಯಾಂಡಲ್ ವುಡ್ ಗೆ ಸಂತಸ ತರಿಸಿದೆ. ಬೆಂಗಳೂರಿನ ಚಿತ್ರಮಂದಿರಗಳಲ್ಲಿಯೇ ಹೆಚ್ಚು ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಕಲೆಕ್ಷನ್ ಮಾಹಿತಿಯನ್ನು ಬಲ್ಲ ಮೂಲಗಳಿಂದ ತಿಳಿದುಕೊಳ್ಳಲಾಗಿದೆಯೇ ಹೊರತು, ಅಧಿಕೃತವಾಗಿ ನಿರ್ಮಾಣ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಕಲೆಕ್ಷನ್ ಏನೇ ಇರಲಿ, ಅಪ್ಪು ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿರುವುದು ಮಾತ್ರ ಹೆಮ್ಮೆಯ ಸಂಗತಿ. ಕರ್ನಾಟಕ ರತ್ನ ಕನ್ನಡಿಗರ ಮನದಲ್ಲಿ ಹೀಗೆ ಮಿನುಗುತ್ತಿರಲಿ ಎಂಬುವುದು ಕರ್ನಾಟಕ ನ್ಯೂಸ್ ಬೀಟ್ ಆಶಯವಾಗಿದೆ.