ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣ ದೊಡ್ಡ ಸದ್ದು ಮಾಡುತ್ತಿದ್ದು, ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳು ತಿರುಗಿ ಬಿದ್ದಿವೆ.
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಎಲ್ಲ ಪಕ್ಷಗಳ ಪಡಸಾಲೆಯಲ್ಲೂ ಹನಿಟ್ರ್ಯಾಪ್ ದ್ದೇ ಸುದ್ದಿ ಎನ್ನುವಂತಾಗಿದೆ. ಆಡಳಿತ ಪಕ್ಷದ ಮಂತ್ರಿಯೊಬ್ಬರು ಹನಿ ಟ್ರ್ಯಾಪ್ ಮಾಡಿಸಿದ್ದಾರೆಂದು ವಿಪಕ್ಷಗಳು ಆರೋಪಿಸುತ್ತಿವೆ. ಇದಕ್ಕೆ ಠಕ್ಕರ್ ಕೊಡುವುದಕ್ಕಾಗಿ ಕಾಂಗ್ರೆಸ್ ಮುಖಂಡರು ಬಿಜೆಪಿ ಶಾಸಕರೊಬ್ಬರ ಹನಿಟ್ರ್ಯಾಪ್ ಕಹಾನಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಇಂದು ನಗರದ ಬಿಜೆಪಿ ಶಾಸಕನ ಹನಿ ಟ್ರಾಪ್ ಅಡಿಯೋ ರಿಲೀಸ್ ಆಗುವ ಸಾಧ್ಯತೆ ಇದೆ. ಬಿಜೆಪಿ ಶಾಸಕ ಮುನ್ನಿರತ್ನ ವಿರುದ್ಧ ಹನಿಟ್ರ್ಯಾಪ್ ಆಡಿಯೋ ರಿಲೀಸ್ ಆಗುವ ಸಾಧ್ಯತೆ ಇದೆ. ಹನಿಟ್ರ್ಯಾಪ್ ಗೆ ಸಹಾಯ ಮಾಡಿರುವ ಆಡಿಯೋವನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಸಂತ್ರಸ್ತ ಮಹಿಳೆಯರನ್ನು ಬಿಜೆಪಿ ಶಾಸಕ ಹನಿಟ್ರ್ಯಾಪ್ ಗೆ ಹೇಗೆ ಬಳಸಿಕೊಂಡ ಎಂಬ ಆಡಿಯೋ ಬಿಡುಗಡೆ ಮಾಡಲಾಗುತ್ತಿದೆ. ಹಾಗಾದರೆ, ಶಾಸಕ ಮುನ್ನಿರತ್ನ ಹನಿಟ್ರ್ಯಾಪ್ ಗೆ ಬೆಂಬಲ ನೀಡಿದರಾ? ಹನಿಟ್ರ್ಯಾಪ್ ನಲ್ಲಿ ಮುನಿರತ್ನ ಪಾತ್ರ ಏನು? ಇದಕ್ಕೆಲ್ಲ ಉತ್ತರ ಸಿಗುವ ಸಾಧ್ಯತೆ ಇದೆ.