ಬೆಂಗಳೂರು: ಚಂದನವನದ ಹಿರಿಯ ನಿರ್ದೇಶಕ ಎ.ಟಿ. ರಘು(79) ನಿಧನರಾಗಿದ್ದಾರೆ.
ಖ್ಯಾತ ನಿರ್ದೇಶಕ ಎ.ಟಿ. ರಘು (AT Raghu) ಅಂಬರೀಶ್ ಅಭಿನಯದ ‘ಮಂಡ್ಯದ ಗಂಡು’ ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಚಿತ್ರರಂಗ ಸಂತಾಪ ಸೂಚಿಸುತ್ತಿದೆ.
ರಘು ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ನಿರಂತರವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಸದ್ಯ ಬೆಂಗಳೂರಿನ ಆರ್ಟಿ ನಗರದ ಮಠದಹಳ್ಳಿಯಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿದೆ. ಇಂದು (ಮಾರ್ಚ್ 21) ಮದ್ಯಾಹ್ನ 2 ಗಂಟೆ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ರಘು ಅವರು ಪತ್ನಿ, ಮಗಳನ್ನು ಅಗಲಿದ್ದಾರೆ.
ರಘು ಮೂಲತಃ ಕೊಡಗಿನವರು. ನಿರ್ದೇಶಕನಾಗಿ, ನಿರ್ಮಾಪಕರನಾಗಿ, ಚಿತ್ರಕಥೆ ಬರಹಗಾರನಾಗಿ ಗುರುತಿಸಿಕೊಂಡಿದ್ದರು. ಅವರು ಹಿಂದಿಯಲ್ಲಿ ಕೂಡ ನಿರ್ದೇಶನ ಮಾಡಿದ್ದಾರೆ.