ಚಾಮರಾಜನಗರ: ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕ ಹೈಟೆನ್ಶನ್ ವಿದ್ಯುತ್ ಕಂಬ ಹತ್ತಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಟಿಸಿ ಹುಂಡಿ ಹತ್ತಿರ ಈ ಘಟನೆ ನಡೆದಿದೆ. ಮಸಣಶೆಟ್ಟಿ (27) ಸಾವನ್ನಪ್ಪಿರುವ ಯುವಕ. ಮಸಣಶೆಟ್ಟಿ ಮದುವೆಗೆ ತಯಾರಿ ನಡೆಸಿದ್ದ. ಆದರೆ, ಯಾವುದೇ ಹೆಣ್ಣು ಸಿಕ್ಕಿರಲಿಲ್ಲ. ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಹೀಗಾಗಿ ವಿದ್ಯುತ್ ಕಂಬ ಏರಿದ್ದಾನೆ. ಕಂಬದಿಂದ ಕೆಳಗಿಳಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇಳಿಯುವ ವೇಳೆ ವಿದ್ಯುತ್ ವೈರ್ ತಗುಲಿ ಸಾವನ್ನಪ್ಪಿದ್ದಾನೆ. ಇತ್ತೀಚೆಗೆ ಮಸಣಶೆಟ್ಟಿ ಕುಡಿತದ ದಾಸನಾಗಿದ್ದ ಎನ್ನಲಾಗಿದೆ. ತಾಯಿಯ ಎದುರೇ ಮಗ ಸಾವನ್ನಪ್ಪಿದ್ದಾನೆ. ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.