ಬೆಂಗಳೂರು: ಚಂದನವನದ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ವಿಚಾರಣೆ ಎದುರಿಸಿದ್ದಾರೆ.
ಪ್ರೋಟೋಕಾಲ್ ದುರ್ಬಳಕೆ ಕುರಿತು ತನಿಖೆ ಕೈಗೊಂಡಿರುವ ಗೌರವ್ ಗುಪ್ತ ತಂಡವು ರಾಮಚಂದ್ರ ರಾವ್ ಶಕ್ತಿ ಭವನದಲ್ಲಿ ವಿಚಾರಣೆಗೊಳಪಡಿಸಿತು. ಈ ವೇಳೆ ಐಪಿಎಸ್ ಅಧಿಕಾರಿಯ ಹೇಳಿಕೆಗಳನ್ನು ತನಿಖಾ ತಂಡ ದಾಖಲಿಸಿಕೊಂಡಿದೆ.
ಅಲ್ಲದೇ, ರಾಮಚಂದ್ರರಾವ್ ಅವರೊಂದಿಗೆ10ಕ್ಕೂ ಅಧಿಕ ಜನರ ವಿಚಾರಣೆಯನ್ನು ತಂಡ ನಡೆಸಿದೆ. ರನ್ಯಾರಾವ್‌ಗೆ ಪ್ರೋಟೋಕಾಲ್ ನೀಡಿದ್ದರ ಕುರಿತು ಮಾಹಿತಿ ಪಡೆಯಲಾಯಿತು. ಐಎಎಸ್ ಅಧಿಕಾರಿ ಗೌರವ್ ಗುಪ್ತ, ಡಿಐಜಿ ವಂಶಿ ಕೃಷ್ಣ ನೇತೃತ್ವದಲ್ಲಿ ತನಿಖೆ ನಡೆಯಿತು. ಈ ವರದಿಯನ್ನು ಸರ್ಕಾರಕ್ಕೆ ತನಿಖಾ ತಂಡ ಬುಧವಾರ ನೀಡಲಿದೆ.