ಬೆಂಗಳೂರು : ಎಚ್ ಪಿ ಇಂದು ನವ ಪೀಳಿಗೆಯ ಹೊಸ ಶ್ರೇಣಿಯ ವಾಣಿಜ್ಯ ಎಐ ಪಿಸಿಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವ್ಯಾಪಾರ ಮತ್ತು ವೃತ್ತಿಪರರ ಬದಲಾವಣೆಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಪಿಸಿಗಳನ್ನು ವಿನ್ಯಾಸಗೊಳಿಸಲಾಗಿದೆ. ಮೂರು ಮಾದರಿಗಳ ಪಿಸಿಗಳಾದ ಎಚ್ ಪಿ ಎಲೈಟ್ ಬುಕ್ ಅಲ್ಟ್ರಾ ಜಿ1ಇ 14- ಇಂಚು, ಎಚ್ ಪಿ ಎಲೈಟ್ ಬುಕ್ ಎಕ್ಸ್ ಜಿ1ಇ 14-ಇಂಚು ಮತ್ತು ಎಚ್ ಪಿ ಎಲೈಟ್ ಬುಕ್ ಎಕ್ಸ್ ಜಿ1ಇ ಫ್ಲಿಪ್ 14-ಇಂಚು ಹೊಂದಿರುವ ಪಿಸಿಗಳಾಗಿವೆ.
ಇತ್ತೀಚಿನ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಗಳಿಂದ ಚಾಲಿತವಾಗಿರುವ ಈ ಪಿಸಿಗಳು ನ್ಯೂರಲ್ ಪ್ರೊಸೆಸಿಂಗ್ ಯುನಿಟ್ (NPU) ಅನ್ನು ಒಳಗೊಂಡಿದ್ದು, ಪ್ರತಿ ಸೆಕೆಂಡಿಗೆ 48 ಟ್ರಿಲಿಯನ್ ಆಪರೇಷನ್ ಗಳನ್ನು (TOPS) ನಿರ್ವಹಿಸಬಹುದಾದ ಸಾಮರ್ಥ್ಯವನ್ನು ಹೊಂದಿವೆ. ಇದಲ್ಲದೇ, ಎಚ್ ಪಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಎಲೈಟ್ ಬುಕ್ ಎಕ್ಸ್ ಜಿ1ಎ 14-ಇಂಚಿನ ನೋಟ್ ಬುಕ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಎಂಡಿ ರೈಸೆನ್ ಪ್ರೊಸೆಸರ್ ಗಳು ಇರಲಿವೆ ಮತ್ತು ತನ್ನ NPU ನೊಂದಿಗೆ ಕೈಗಾರಿಕಾ ಆಧಾರಿತ 55 ಟಿಒಪಿಎಸ್ ಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಎಐ ಕಾರ್ಯಕ್ಷಮತೆಯಲ್ಲಿ ಹೊಸ ಮೈಲಿಗಲ್ಲಾಗಿದೆ.
ಕೆಲಸದ ವಾತಾವರಣವು ವಿಕಸನಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾಯಕರಿಗೆ ಮೊಬೈಲ್ ಸಾಧನಗಳ ಅಗತ್ಯವಿರುತ್ತದೆ. ಇದು ಅವರನ್ನು ಸದಾ ಸಂಪರ್ಕದಲ್ಲಿರಿಸುತ್ತದೆ. ಆದರೆ, ಅವರ ಉತ್ಪಾದಕತೆ, ಸಹಯೋಗ ಮತ್ತು ಸುರಕ್ಷತೆಯನ್ನು ಹೆಚ್ಚಿಸುವಂತೆ ಮಾಡುತ್ತದೆ. ಎಚ್ ಪಿಯ ಇತ್ತೀಚಿನ ಜನ್ ನೆಕ್ಸ್ಟ್ ಎಐ- ಚಾಲಿತ ಎಲೈಟ್ ಬುಕ್ ಗಳ ಶ್ರೇಣಿಯನ್ನು ಈ ಅಗತ್ಯತೆಗಳನ್ನು ಪೂರೈಸಲು ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಇವುಗಳು ಅಲ್ಟ್ರಾ-ಲೈಟ್ ವಿನ್ಯಾಸಗಳು, ದೀರ್ಘಕಾಲೀನ ಬ್ಯಾಟರಿಗಳು ಮತ್ತು ತಡೆರಹಿತವಾದ ಬಹುಕಾರ್ಯಕ್ಕಾಗಿ ಶಕ್ತಿಶಾಲಿ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ. ಅಲ್ಲದೇ, ವಿಷಯ ರಚನೆ ಮತ್ತು ಡೇಟಾ ವಿಶ್ಲೇಷಣೆಯಂತಹ ಕಾರ್ಯಕ್ಷಮತೆಯಲ್ಲಿ ಉತ್ಕೃಷ್ಟತೆಯನ್ನು ನೀಡುತ್ತವೆ.
ಎಚ್ ಪಿ ಎಐ ಕಂಪ್ಯಾನಿಯನ್ ಮತ್ತು ಪಾಲಿ ಕ್ಯಾಮೆರಾ ಪ್ರೊ ನಂತಹ ಎಐ-ವರ್ಧಿತ ವೈಶಿಷ್ಟ್ಯತೆಗಳೊಂದಿಗೆ ಎಲೈಟ್ ಬುಕ್ಸ್ ಬಳಕೆದಾರರ ಅನುಭವವನ್ನು ವೈಯಕ್ತೀಕರಣಗೊಳಿಸುತ್ತದೆ ಮತ್ತು ಅದರ ಕಾರ್ಯಕ್ಷಮತೆಯನ್ನು ಗರಿಷ್ಟಗೊಳಿಸುತ್ತದೆ. ಈ ಮೂಲಕ ಸಹಯೋಗವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುತ್ತದೆ. ಸಂಯೋಜಿತ ಮೈಕ್ರೋಸಾಫ್ಟ್ ಕಾಪಿಲೊಟ್ ಕೀಯು ಸರಳವಾದ ಪ್ರಾಂಪ್ಟ್ ನೊಂದಿಗೆ ಎಐ ಸಹಾಯಕ್ಕೆ ಸುಲಭವಾದ ರೀತಿಯಲ್ಲಿ ಪ್ರವೇಶವನ್ನು ಕಲ್ಪಿಸುತ್ತದೆ. ಇದರ ಜೊತೆಗೆ ಎಚ್ ಪಿ ವೂಲ್ಫ್ ಸೆಕ್ಯೂರಿಟಿಯು ಭವಿಷ್ಯದ ಸೈಬರ್ ಬೆದರಿಕೆಗಳ ವಿರುದ್ಧ ದೃಢವಾದ
ರೀತಿಯಲ್ಲಿ ರಕ್ಷಣೆಯನ್ನು ನೀಡುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಸೂಕ್ಷ್ಮ ಡೇಟಾಗಳನ್ನು ಅತ್ಯಂತ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದಾಗಿದೆ.