ಬೆಳಗಾವಿ: ಗಡಿಯಲ್ಲಿ ಎಂಇಎಸ್ ಪುಂಡರ ಉದ್ಧಟತನ ಇನ್ನೂ ನಿಲ್ಲುತ್ತಿಲ್ಲ. ನಮ್ಮ ರಾಜ್ಯದ ನೆಲದಲ್ಲೇ ನಿಂತು ಮಹಾರಾಷ್ಟ್ರ ಪ್ರೇಮ ಮೆರೆದರೂ ಬೆಳಗಾವಿ ಪೊಲೀಸರು ಮಾತ್ರ ಮೌನ ವಹಿಸಿ ನಿಂತಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಹೋಳಿ (Holi) ಹಬ್ಬದ ಸಂದರ್ಭದಲ್ಲಿ ಏಕತೆ (Unity) ಪ್ರದರ್ಶಿಸಬೇಕಾಗಿದ್ದ ಎಂಇಎಸ್ ಪುಂಡರು(MES) ಪುಂಡರು ಬೆಳಗಾವಿಯಲ್ಲಿ (Belagavai) ಪುಂಡಾಟ ಮೆರೆದಿದ್ದಾರೆ. “ಜೈ ಜೈ ಮಹಾರಾಷ್ಟ್ರ ನನ್ನದು” ಎಂಬ ಹಾಡಿಗೆ ಎಂಇಎಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ. ಈ ರೀತಿ ಹಾಡು ಹಾಡಿ ವಿಕೃತಿ ಮೆರೆಯುತ್ತಿದ್ದರೂ ಬೆಳಗಾವಿ ಪೊಲೀಸರು ಮಾತ್ರ ಮೌನ ವಹಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ನಿನ್ನೆ ಬೆಳಗಾವಿಯ ಚವಾಟ್‌ಗಲ್ಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.