ಮೈಸೂರು: ಇಲ್ಲಿಯ ಉದಯಗಿರಿಯ ಗಲಾಟೆಗೆ ಕಾರಣವಾಗಿದ್ದ ಆರೋಪಿ ಗಡಿಪಾರು ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಆರೋಪಿ ಸತೀಶ್, ವಿವಾದಿತ ಪೋಸ್ಟ್ ನಿಂದ ಉದಯಗಿರಿಯಲ್ಲಿ (Udayagiri) ಗಲಾಟೆ ಸೃಷ್ಟಿಯಾಗಿತ್ತು ಎನ್ನಲಾಗಿದೆ. ಆದರೆ, ಗಡಿಪಾರು ಕೋರಿ ಪೊಲೀಸರು ಸಲ್ಲಿಸಿದ್ದ ನೋಟಿಸ್ನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಗಡಿಪಾರು (Exile) ನೋಟಿಸ್ ನೀಡುವಾಗಿನ ಕಾರ್ಯವಿಧಾನ ಲೋಪದಿಂದ ಕೂಡಿದೆ ಎಂಬ ಅಂಶ ಉಲ್ಲೇಖಿಸಿ ಸೆಷನ್ಸ್ ಕೋರ್ಟ್ ಗಡಿಪಾರು ನೋಟಿಸ್ ವಜಾಗೊಳಿಸಿದೆ.
ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆಂಬ ಕಾರಣಕ್ಕೆ ಮುಸ್ಲಿಂನ ಹಲವರು ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಸತೀಶ್ ಗಡಿಪಾರಿಗೆ ಪೊಲೀಸರು ಸಿದ್ಧತೆ ಮಾಡಿದ್ದರು. ಆದರೆ ಪೊಲೀಸರ ಕ್ರಮ ಪ್ರಶ್ನಿಸಿ ಸತೀಶ್ ಪರ ವಕೀಲ ಮೈಸೂರು ಜಿಲ್ಲಾ ಕೋರ್ಟ್ ಮೆಟ್ಟಿಲೇರಿದ್ದರು. ಮೈಸೂರಿನ ಉದಯಗಿರಿ ಗಲಾಟೆ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು.