ಬೆಂಗಳೂರು: ಮಾರುಕಟ್ಟೆಯಲ್ಲಿ ಕಲಬೆರಕೆ ತೊಗರಿ ಬೇಳೆ, ಕೇಸರಿ ಬೇಳೆ ಕಾಲಿಟ್ಟಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ.
ಈ ಕುರಿತು ಆಹಾರ ತಜ್ಞರು ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿ ದೃಢಪಡಿಸಿ, ಜನರಿಗೆ ಕಿವಿ ಮಾತು ಹೇಳಿದ್ದಾರೆ. ಮಾರುಕಟ್ಟೆಗೆ ಕಾಲಿಟ್ಟಿರುವ ಬೇಳೆಯಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ ಅಂಶ ಪತ್ತೆಯಾಗಿದೆ. ಇವುಗಳನ್ನು ತಿನ್ನುವುದರಿಂದ ಪಾರ್ಶ್ವವಾಯು ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಕೇಸರಿ ಬೇಳೆ ತಿಂದ್ರೆ ಲೆಥರಿಸಂ ಕಾಯಿಲೆ ಬರುತ್ತದೆ. ಇದರಿಂದ ಎರಡೂ ಕಾಲುಗಳ ನರ ಹಾಗೂ ಮಾಂಸಖಂಡಗಳಲ್ಲಿ ನ್ಯೂನತೆ ಕಾಣಿಸಿಕೊಳ್ಳುತ್ತದೆ. ಹೀಗಾದಾಗ ಶಾಶ್ವತ ಅಂಗವೈಕಲ್ಯವೂ ಬರಬಹುದು ಎಂದು ತಜ್ಞರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕಲಬೆರಕೆ ಹಾಗೂ ಕೆಮಿಕಲ್ ಯುಕ್ತ ಬೇಳೆಗಳ ಬಗ್ಗೆ ಎಚ್ಚರ ಇರಲಿ ಎಂದು ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆಯ ಶ್ರೀನಿವಾಸ್ ನೇತೃತ್ವದಲ್ಲಿ ತಜ್ಞರು ಪರೀಕ್ಷೆ ಮಾಡಿ ಸಾಬೀತು ಪಡಿಸಿ, ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ, ತಜ್ಞರು ಹೇಳಿದಂತೆ ಮಾರುಕಟ್ಟೆಯಲ್ಲಿ ಗಮನಿಸಿ ಬೇಳೆಕಾಳು ಸೇರಿದಂತೆ ಆಹಾರ ಪದಾರ್ಥಗಳನ್ನು ಖರೀದಿ ಮಾಡಿ. ಇಲ್ಲವಾದರೆ, ಅನಾರೋಗ್ಯಕ್ಕೆ ತುತ್ತಾಗಬಹುದು. ಕಡಿಮೆ ಬೆಲೆಗೆ ಸಿಗುತ್ತದೆಂದು ಸಿಕ್ಕಿದ್ದು ಖರೀದಿಸಬೇಡಿ. ಆನಂತರ ಆರೋಗ್ಯ ಪಡೆಯುವುದಕ್ಕಾಗಿ ಸಾಲ-ಶೂಲ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಇರಲಿ ಎಚ್ಚರ. ಇದು ಕರ್ನಾಟಕ ನ್ಯೂಸ್ ಬೀಟ್ ಆಶಯ.