ಬೆಂಗಳೂರು: ನಮ್ಮ ಮೆಟ್ರೋದಿಂದ ಕನ್ನಡ ಅಭ್ಯರ್ಥಿಗಳಿಗೆ ದ್ರೋಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹೀಗಾಗಿ ನಮ್ಮ ಮೆಟ್ರೋ ಅಧಿಕಾರಿಗಳ ಕನ್ನಡ ವಿರೋಧದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮೆಟ್ರೋ ಟ್ರೈನ್ ಆಪರೇಟರ್ ಪೋಸ್ಟ್ ಗೆ ಕನ್ನಡದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕದಂತೆ ಕಠಿಣ ರೂಲ್ಸ್ ಜಾರಿಗೆ ತರಲಾಗಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳ ವಿರುದ್ಧ ರಾಜ್ಯದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೈದರಾಬಾದ್ ಮೆಟ್ರೋ ಮತ್ತು ಚೆನೈ ಮೆಟ್ರೋ ರೈಲಿನ ಚಾಲಕರು ಮಾತ್ರ ಅಪ್ಲಿಕೇಶನ್ ಹಾಕುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಚೆನೈ ಮತ್ತು ಹೈದರಾಬಾದ್ ಮೆಟ್ರೋದಲ್ಲಿ ಮಾತ್ರ ಗುತ್ತಿಗೆ ಆಧಾರದಲ್ಲಿ ಟ್ರೈನ್ ಅಪರೇಟರ್ ಗಳು ಕೆಲಸ ಮಾಡುತ್ತಿದ್ದಾರಂತೆ. ಬಿಎಂಆರ್ ಸಿಎಲ್ ನ ಹೆಚ್.ಆರ್ ಡಿಪಾರ್ಟ್ಮೆಂಟ್ ನಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಅಧಿಕಾರಿಗಳಿದ್ದು, ತಮ್ಮ ಭಾಷೆ ಮಾತಾಡುವ ನೌಕರರನ್ನು ನೇಮಕ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಮ್ಮ ಮೆಟ್ರೋ 50 ಟ್ರೈನ್ ಆಪರೇಟರ್ ಪೋಸ್ಟ್ ಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೆಲ ನಿಯಮಗಳನ್ನು ಹಾಕಲಾಗಿದೆ. ಅದರಲ್ಲಿ ಟ್ರೈನ್ ಆಪರೇಟರ್ ಪೋಸ್ಟ್ ಗೆ ಅಪ್ಲಿಕೇಶನ್ ಹಾಕಬೇಕು. ಅಂದರೆ 3 ವರ್ಷ ಟ್ರೈನ್ ಆಪರೇಟ್ ಮಾಡಿರುವ ಅನುಭವವಿರಬೇಕೆಂದಿದ್ದಾರೆ. ಆದರೆ ಹೈದರಾಬಾದ್ ಮತ್ತು ಚೆನೈ ಮೆಟ್ರೋದಲ್ಲಿ ಮಾತ್ರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿರುವ ಟ್ರೈನ್ ಆಪರೇಟರ್ ಇದ್ದಾರೆ. ಹೀಗಾಗಿ ಅವರಿಗೆ ಮಾತ್ರ ಅಪ್ಲಿಕೇಶನ್ ಹಾಕುವ ಅವಕಾಶ ಸಿಗುತ್ತಿದೆ.
ನಮ್ಮ ರಾಜ್ಯದಲ್ಲಿ ಮೂರು ವರ್ಷ ಟ್ರೈನ್ ಆಪರೇಟ್ ಮಾಡಿರುವ ಒಬ್ಬರೇ ಒಬ್ಬ ಅಭ್ಯರ್ಥಿ ಇಲ್ಲವಂತೆ. ಉದ್ಯೋಗಕ್ಕೆ ಆಯ್ಕೆಯಾದ ನಂತರ ಕನ್ನಡ ಬಾರದ ಅಭ್ಯರ್ಥಿಗಳಿಗೆ ಕನ್ನಡ ಕಲಿಯಲು ಒಂದು ವರ್ಷ ಅವಕಾಶ ನೀಡಲಾಗಿದೆ. ನಮ್ಮ ರಾಜ್ಯದ ನಮ್ಮ ಭಾಷೆಯ ಟ್ರೈನ್ ಅಪರೇಟರ್ ಗಳು ಕೆಲಸಕ್ಕೆ ಬಂದರೆ, ಮಾತು ಕೇಳಲ್ಲ. ಕನ್ನಡಿಗ ಟ್ರೈನ್ ಅಪರೇಟರ್ ಗಳು ನೇಮಕವಾದರೆ, ಯೂನಿಯನ್ ಮಾಡುತ್ತಾರೆ. ಪ್ರತಿಭಟನೆ ಮಾಡುತ್ತಾರೆ. ಹೀಗಾಗಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.