ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) (NIMHANS Recruitment 2025) ಸಂಸ್ಥೆಯಲ್ಲಿ 32 ಫೀಲ್ಡ್ ಡೇಟಾ ಕಲೆಕ್ಟರ್ ಹುದ್ದೆಗಳು ಖಾಲಿ ಇದ್ದು, ಮಾರ್ಚ್ 19ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ. ಬೆಳಗ್ಗೆ 10 ಗಂಟೆಯಿಂದಲೇ ಸಂದರ್ಶನ ಆರಂಭವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು ಎಂದು ನಿಮ್ಹಾನ್ಸ್ ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿಗೆ ನಿಮ್ಹಾನ್ಸ್ ವೆಬ್ ಪೋರ್ಟಲ್ ಆಗಿರುವ https://nimhans.ac.in/ ಗೆ ಸಂಪರ್ಕಿಸಬಹುದಾಗಿದೆ. ಮಾಸಿಕ 15 ಸಾವಿರ ರೂ. ವೇತನ ನೀಡಲಾಗುತ್ತದೆ
ಅರ್ಜಿ ಸಲ್ಲಿಸಲು ಅರ್ಹತೆಗಳು ಏನೇನು?
- ಪಿಯುಸಿ, ಐಟಿಐ ಕೋರ್ಸ್ ಮುಗಿಸಿದವರೂ ಅರ್ಜಿ ಸಲ್ಲಿಸಬಹುದು
- ಸಮಾಜ ವಿಜ್ಞಾನ, ಮನೋವಿಜ್ಞಾನ, ಮಹಿಳಾ ಅಧ್ಯಯನದಲ್ಲಿ ಪದವಿ ಪಡೆದಿರಬೇಕು
- ಕಮ್ಯುನಿಟಿಯ ಡೇಟಾ ಸಂಗ್ರಹ ಗೊತ್ತಿರಬೇಕು
- ತಂಡದಲ್ಲಿ ಕೆಲಸ ಮಾಡುವ, ಒಳ್ಳೆಯ ಸಂವಹನ ಇರಬೇಕು
- ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿ ಭಾಷೆ ಮೇಲೆ ಹಿಡಿತ ಇರಬೇಕು
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ಮಾರ್ಚ್ 19ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: ಪರೀಕ್ಷಾ ಹಾಲ್, 4 ನೇ ಮಹಡಿ, NBRC ಕಟ್ಟಡ, ನಿಮ್ಹಾನ್ಸ್, ಬೆಂಗಳೂರು-560029.