ನಟ ಅಂಬರೀಷ್ (Ambareesh) ನೇರ ನುಡಿಯ ನಟ ಎಂದೇ ಹೆಸರು ಮಾಡಿದ್ದರು. ಹೀಗಾಗಿಯೇ ಅಭಿಮಾನಿಗಳು ಅವರನ್ನು ಮೆಚ್ಚಿಕೊಳ್ಳುತ್ತಿದ್ದರು. ಈಗ ಅಂಬರೀಶ್ ಬಗ್ಗೆ ಹಿರಿಯ ನಟಿ ಜಯಮಾಲಾ ಅಪರೂಪದ ಮಾಹಿತಿ ಹಂಚಿಕೊಂಡಿದ್ದಾರೆ.
ಸೃಜನ್ ಲೋಕೇಶ್ ಅವರ ‘ಮಜಾ ಟಾಕೀಸ್’ ವೇದಿಕೆಯಲ್ಲಿ ಕೆಲವು ಹಿರಿಯ ನಟರು ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದರು. ಈ ವೇಳೆ ಜಯಮಾಲಾ, ‘ಒಮ್ಮೆ ಅಂಬರೀಷ್ ಅವರು ಸ್ಕೂಟರ್ ಬೋಟ್ನಲ್ಲಿ ಕರೆದುಕೊಂಡು ಹೋದರು. ಹಿಂದೆ ನಾವು ಕುಳಿತುಕೊಳ್ಳಬೇಕಿತ್ತು. ಸಮುದ್ರ ಕಂಡರೆ ಭಯ ನನಗೆ. ಏನೂ ಆಗಲ್ಲ ಎಂದರು. ಸ್ಪೀಡ್ ಅಲ್ಲಿ ಹೋಗ್ತಾ ಇದ್ವಿ. ನನಗೆ ಪ್ರಜ್ಞೆ ತಪ್ಪೋಯ್ತು. ಸಮುದ್ರದಲ್ಲಿ ಬಿದ್ದೋದೆ’ ಎಂದು ಹೇಳಿದ್ದಾರೆ.
‘ಹೀರೋಯಿನ್ ಎಲ್ಲಿ ಎಂದು ಅಂಬರೀಷ್ ಕೇಳಿದರು. ಆಗ ಬಿದ್ದೋಗಿದಾರೆ ಎಂದು ಅಂಬರೀಷ್ ಗೆ ಹೇಳಲಾಯಿತು. ಮೂರು ದಿನ ಆದಮೇಲೆ ಎಚ್ಚರಿಕೆ ಆಯಿತು. ನನಗೆ ಯಾಕೆ ಸಮುದ್ರದಲ್ಲಿ ಹಾಕಿದೆ ಎಂದು ಕೇಳಿದೆ. ಹೋಗಮ್ಮೋ ನನಗೆ ಎಲ್ಲಿದ್ದೆ ಅಂತ ಗೊತ್ತಾಗಲಿಲ್ಲ ಎಂದು ಅಂಬರೀಷ್ ಹೇಳಿದರು ಎಂದು ಜಯಮಾಲಾ ನಗೆ ಚಟಾಕಿ ಹಾರಿಸಿದ್ದಾರೆ.