ಗದಗ: ಕಿಡಿಗೇಡಿಗಳು ಮೊಟ್ಟೆ, ಸಗಣಿ, ಮರಳು, ರಾಸಾಯನಿಕ ಗೊಬ್ಬರ, ಪಿನಾಯಿಲ್, ಮದ್ಯಪಾನ, ಕಲುಷಿತ ಬಣ್ಣ, ಗಾಜಿನ ಪುಡಿ ಮಿಶ್ರಣ ಮಾಡಿ ವಿದ್ಯಾರ್ಥಿನಿಯರಿಗೆ ಬಣ್ಣ ಹಚ್ಚಿದ ಪರಿಣಾಮ ದುರ್ವಾಸನೆಯಿಂದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ (Laxmeshwara) ತಾಲೂಕಿನ ಸುವರ್ಣಗಿರಿ ತಾಂಡದಲ್ಲಿ ನಡೆದಿದೆ. 8 ಜನ ವಿದ್ಯಾರ್ಥಿಯರು ಶಾಲೆಗೆ ಹೊರಟಿದ್ದ ವೇಳೆ ಪೋಲಿ ಯುವಕರ ಗುಂಪು ವಿದ್ಯಾರ್ಥಿನಿಗಳು ಬಸ್ ಹತ್ತುವ ಸಂದರ್ಭದಲ್ಲಿ ಏಕಾಏಕಿ ಬಣ್ಣ ಎರಚಿದ್ದಾರೆ. ದುರ್ವಾಸನೆಯಿಂದಾಗಿ ಉಸಿರಾಟದ ತೊಂದರೆಯಾಗಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಉಸಿರಾಟದ ತೊಂದರೆ, ಎದೆನೋವು, ಕಣ್ಣು ಉರಿ, ತಲೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರನ್ನು ಗದಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.