ಬೆಂಗಳೂರು: ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಹಗರಣವೊಂದು ಬಯಲಿಗೆ ಬಂದಿದ್ದು, ದಾಖಲೆ ಸಮೇತ ನಿಮ್ಮ ಕರ್ನಾಟಕ ನ್ಯೂಸ್ ಬೀಟ್ ಬಯಲು ಮಾಡಿದೆ.
ಕಂದಾಯ ವಿಭಾಗದ ವಿಶೇಷ ಅಯುಕ್ತ ಮೂನಿಷ್ ಮೌದ್ಗಿಲ್ ಈ ಹಗರಣ ಬಯಲು ಮಾಡಿದ್ದಾರೆ. ಮಹಾದೇವಪುರ ವಲಯ ಕಂದಾಯ ಅಧಿಕಾರಿ ಬಸವಾಚಾರಿ ಹಗರಣವನ್ನು ಬಯಲು ಮಾಡಿದ್ದಾರೆ.
ನಗರದಲ್ಲಿನ ವೈದೇಹಿ ಅಸ್ಪತ್ರೆ 50 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಆದರೆ, ಈ ಖತರ್ನಾಕ ಕಂದಾಯ ಅಧಿಕಾರಿ ಕಡತವನ್ನೇ 1 ವರ್ಷದಿಂದ ಬಚ್ಚಿಟ್ಟುಕೊಂಡಿದ್ದ ಎನ್ನಲಾಗಿದೆ.
ಪಾಲಿಕೆ ಬಾಕಿ ಅಸ್ತಿ ತೆರಿಗೆ ಲಿಸ್ಟ್ ನಲ್ಲಿಯೂ ವೈದೇಹಿ ಆಸ್ಪತ್ರೆ ಹೆಸರು ಇರದಂತೆ ಈ ಅಧಿಕಾರಿ ನೋಡಿಕೊಂಡಿದ್ದಾನೆ. ಈಗ ಮನಿಷ್ ಮೌದ್ಗಿಲ್ ಸಾಕ್ಷಿ ಸಮೇತ ಈ ಪ್ರಕರಣವನ್ನು ಬಯಲು ಮಾಡಿದ್ದಾರೆ. ಅಲ್ಲದೇ, ಬಸವಾಚಾರಿ ಅಮಾನತ್ತಿಗೂ ಶಿಫಾರಸ್ಸು ಮಾಡಿದ್ದಾರೆ.
ಅಧಿಕಾರಿ ಮಾಡಿರುವ ತಪ್ಪೇನು?
ವೈಟ್ ಫೀಲ್ಡ್ ನಲ್ಲಿರುವ ವೈದೇಹಿ ಆಸ್ಪತ್ರೆ ಮಹಾದೇವಪುರ ವಲಯ ವ್ಯಾಪ್ತಿಗೆ ಬರುತ್ತದೆ. ಆಸ್ಪತ್ರೆಯ ವಿಸ್ತೀರ್ಣಕ್ಕೆ ತಕ್ಕಂತೆ ಆಸ್ತಿ ತೆರಿಗೆ ನಿಗದಿ ಆಗಬೇಕು. ಕಂದಾಯ ಅಧಿಕಾರಿ ಈ ತೆರಿಗೆ ನಿಗದಿ ಮಾಡಬೇಕು. ಹೀಗೆ ತೆರಿಗೆಯ ಲೆಕ್ಕ ಮಾಡಿದಾಗ ಆಸ್ಪತ್ರೆಯು 50 ಕೋಟಿ ರೂ.ನಷ್ಟು ತೆರಿಗೆ ಉಳಿಸಿಕೊಂಡಿರುವುದು ಗೊತ್ತಾಗಿದೆ. 50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವೈದೆಹಿ ಆಸ್ಪತ್ರೆ ವಿರುದ್ಧ ಅಸ್ತಿ ಹರಾಜು ಪ್ರಕ್ರಿಯೆಗೆ ಕೈಗೊಳ್ಳಬೇಕಿತ್ತು. ಆದರೆ, ಕಂದಾಯ ಅಧಿಕಾರಿ ಮಾತ್ರ ಆಸ್ಪತ್ರೆಗೆ ಸಂಬಂಧಿಸಿದ ಕಡತವನ್ನೇ ಮಾಯ ಮಾಡಿದ್ದಾನೆ. ಕಡತ ಹುಡುಕಿದರೂ ಸಿಗಬಾರದು ಎಂಬ ಕಾರಣಕ್ಕೆ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಾನೆ.
ಇದನ್ನೆಲ್ಲ ಗಮನಿಸಿದರೆ ದೊಡ್ಡ ಮೊತ್ತದ ಕಿಕ್ ಬ್ಯಾಕ್ ನ್ನು ಈ ಅಧಿಕಾರಿ ಪಡೆದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ತನಿಖೆ ಕೈಗೊಂಡಿರುವ ಆಯುಕ್ತರು, ಪ್ರಕರಣ ಭೇದಿಸಿದ್ದಾರೆ. ಬಸವಾಚಾರಿ ಅಮಾನತ್ತಿಗೂ ಶಿಫಾರಸ್ಸು ಮಾಡಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.