ಬೆಂಗಳೂರು: ರಾಜ್ಯದ ನಂ-1 ಸೆಂಟ್ರಲ್ ಆರ್ ಟಿಒನಿಂದ ಇಂದು ಫ್ಯಾನ್ಸಿ ಹರಾಜು ನಡೆಯಿತು.
ಈ ಬಾರಿ ಫ್ಯಾನ್ಸಿ ನಂಬರ್ ಹರಾಜಿನಲ್ಲಿ ಆರ್ ಟಿಒ ದಾಖಲೆ ಬರೆದಿದೆ. ಬರೋಬ್ಬರಿ 28 ಲಕ್ಷ ರೂ. ಗೂ ಅಧಿಕ ಮೊತ್ತಕ್ಕೆ 0001 ಫ್ಯಾನ್ಸಿ ನಂಬರ್ ಹರಾಜಾಗಿದೆ. ಅಲ್ಲದೇ, ಇಂದು ಫ್ಯಾನ್ಸಿ ನಂಬರ್ ಹರಾಜಿನಿಂದ 1.13 ಕೋಟಿ ರೂ. ಆದಾಯ ಹರಿದು ಬಂದಿದೆ.
ಈ ಹಿಂದೆ KA-NE-0001 ನಂಬರ್ 21.15 ಲಕ್ಷ ರೂ.ಗೆ ಹರಾಜಾಗಿ ದಾಖಲೆ ಬರೆದಿತ್ತು. ಈಗ KA-01 NF-0001 ನಂಬರ್ 28.60 ಲಕ್ಷ ರೂ.ಗೆ ಹರಾಜಾಗಿ ದಾಖಲೆ ಬರೆದಿದೆ.
ಈ ಹರಾಜು ಪ್ರಕ್ರಿಯೆ ಶಾಂತಿನಗರದ ಆರ್ ಟಿಒ ಮುಖ್ಯ ಕಚೇರಿಯಲ್ಲಿ ನಡೆಯಿತು. ಹರಾಜಿನಲ್ಲಿದ್ದ 65 ನಂಬರ್ ಗಳ ಪೈಕಿ 14 ಫ್ಯಾನ್ಸಿ ನಂಬರ್ ಗಳು ಹರಾಜಾಗಿವೆ.
ಅತಿ ಹೆಚ್ಚಿನ ಮೊತ್ತಕ್ಕೆ ಹರಾಜಾದ ಫ್ಯಾನ್ಸಿ ನಂಬರ್ ಗಳು
1-KA01-NF-0001- 28 ಲಕ್ಷದ 60 ಸಾವಿರ ರುಪಾಯಿ.
2-KA-01-NF-9999 4 ಲಕ್ಷದ 80 ಸಾವಿರ ರುಪಾಯಿ.
3-KA-01-NF-0333 – 2 ಲಕ್ಷದ 80 ಸಾವಿರ ರುಪಾಯಿ.
4-KA01-NF-7777 -2 ಲಕ್ಷದ 50 ಸಾವಿರ ರುಪಾಯಿ.
5-KA01-NF-0009 -2 ಲಕ್ಷ ರುಪಾಯಿ.