ಬೆಂಗಳೂರು: ವಿಮಾನದಲ್ಲಿ ನಾನು ಚಿನ್ನ (Gold) ತಂದೇ ಇಲ್ಲ ಎಂದು ನಟಿ ರನ್ಯಾ ರಾವ್ (Ranya Rao) ದೂರು ಸಲ್ಲಿಸಿದ್ದಾರೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳಿಂದ ಅರೆಸ್ಟ್ ಆಗಿ ನ್ಯಾಯಾಂಗ ಬಂಧನದಲ್ಲಿರುವ (Judicial Custody) ರನ್ಯಾ ರಾವ್, ಪರಪ್ಪನ ಅಗ್ರಹಾರ (Parappana Agrahara) ಜೈಲರ್ ಗೆ ಈ ಕುರಿತು ಆರೋಪಿಸಿ ದೂರು ನೀಡಿದ್ದಾರೆ. ಬೇರೆ ಯಾರನ್ನೋ ರಕ್ಷಿಸುವುದಕ್ಕಾಗಿ ನನ್ನನ್ನು ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ನಾನು ವಿಮಾನದಲ್ಲಿ ಚಿನ್ನವನ್ನು ತಂದೇ ಇಲ್ಲ. ಈ ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದೇನೆ. ದುಬೈನಲ್ಲಿ ನನಗೆ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದೆ. ಹೀಗಾಗಿ ದುಬೈಗೆ ತೆರಳುತ್ತಿದ್ದೆ. ಮಾರ್ಚ್ 3 ರಂದು ಬೆಳಗ್ಗೆ ಹೋಗಿ ಕೆಲಸ ಮುಗಿಸಿದ ನಂತರ ಕೂಡಲೇ ಹಿಂದಿರುಗಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರನ್ನು ಪೊಲೀಸ್ ಅಧಿಕಾರಿಗಳು ಡಿಆರ್‌ಐಗೆ ವರ್ಗಾವಣೆ ಮಾಡಿದ್ದಾರೆ. ಈಗ ಡಿಆರ್‌ಐ ಅಧಿಕಾರಿಗಳು ದೂರನ್ನು ಪರಿಶೀಲನೆ ಮಾಡುತ್ತಿದ್ದಾರೆ.