ಬೆಂಗಳೂರು: ರನ್ಯಾ ರಾವ್ ದುಬೈನಿಂದ ತಂದಿದ್ದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಜೋಪಾನವಾಗಿ ಹೊರಗೆ ತಂದು ಅಟೋ ಒಂದರಲ್ಲಿ ಇಟ್ಟು ಹೋಗಿದ್ರೆ, ಪ್ಲಾನ್ ಕಂಪ್ಲೀಟ್ ಆಗುತ್ತಿತ್ತು. ಆದರೆ, ಆಗಿದ್ದೇ ಬೇರೆ.
ಅಷ್ಟರಲ್ಲಿ ತಾನು ಲಾಕ್ ಆಗಿದ್ದಾಗಿ, ನಟಿ ರನ್ಯಾ ರಾವ್ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ದುಬೈನಿಂದ ತಂದ ಚಿನ್ನವನ್ನು ಡೀಲ್ ಒಪ್ಪಿಸಿದ್ದವರು ಅಟೋ ಒಂದರಲ್ಲಿ ಇಡಲು ಹೇಳಿದ್ರು. ಅದಷ್ಟು ಮಾಡಿದ್ರೆ, ನನ್ನ ಕೆಲಸ ಮುಗಿದು ಹೋಗುತ್ತಿತ್ತು ಎಂದು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.