ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಮೂವರು ಗಂಡಸರು ಲಾಕ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣಿಕೆ ಮಾಡಲು ಕಾರಣ ಮೊದಲು ಆಕೆಯ ಬಾಯ್‌ಫ್ರೆಂಡ್ ತರುಣ್, ಎರಡನೆಯದಾಗಿ ಸ್ವಾಮೀಜಿ ಒಬ್ಬರು ಹಾಗೂ ಮೂರನೆಯದು ಡಿಜಿಪಿ ರಾಮಚಂದ್ರ ರಾವ್ ಅವರು ಪರೋಕ್ಷವಾಗಿ ಸಹಕರಿಸಿದ್ದು ಎನ್ನಲಾಗಿದೆ.
ಪ್ರಕರಣದಲ್ಲಿ ಈ ಮೂವರು ಮಂದಿ ಲಾಕ್ ಆಗುವ ಸಾಧ್ಯತೆಯಿದ್ದು, ಈಗಾಗಲೇ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಜಾಮೀನು ಪಡೆದುಕೊಂಡಿದ್ದಾರೆ.