ಬೆಂಗಳೂರು: ದುಬೈನಿಂದ ಚಿನ್ನ ತಂದಿದ್ದ ನಟಿ ರನ್ಯಾ ರಾವ್ ತನ್ನ ಸೊಂಟದ ಭಾಗದಲ್ಲಿ ಚಿನ್ನವನ್ನು ಕ್ರೇಪ್ ಬ್ಯಾಂಡೇಜ್ ಸಹಾಯದಿಂದ ಕಟ್ಟಿಕೊಂಡು ಬಂದಿದ್ದಾಗಿ, ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಜೈಲು ಸೇರಿರುವ ರನ್ಯಾ ರಾವ್, ಯೂಟ್ಯೂಬ್ ಸಹಾಯದೊಂದಿಗೆ ಚಿನ್ನ ಸಾಗಾಣಿಕೆಯ ಮಾರ್ಗವನ್ನು ಅರ್ಥ ಮಾಡಿಕೊಂಡು, ಕ್ರೇಪ್ ಬ್ಯಾಂಡೇಜ್ ಸಹಾಯದಿಂದ ಸೊಂಟದ ಭಾಗದಲ್ಲಿ ಇಟ್ಟುಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.