ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣಿಕೆಗೆ ಬಳಸಿಕೊಂಡಿದ್ದೇ ಯೂಟ್ಯೂಬ್ ಎಂಬ ಮಾಹಿತಿ ಹೊರಬಿದ್ದಿದೆ.
ಈಗಾಗಲೇ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಜೈಲು ಹಕ್ಕಿ ಆಗಿರುವ ಅವರು ತನಿಖಾಧಿಕಾರಿಗಳ ಮುಂದೆ ಚಿನ್ನ ತರುವ ವಿಧಾನವನ್ನು ನಾನು ಯೂಟ್ಯೂಬ್‌ನಲ್ಲಿ ನೋಡಿ ತಿಳಿದುಕೊಂಡೆ. ಯೂಟ್ಯೂಬ್‌ನಲ್ಲಿ ಚಿನ್ನವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಳ್ಳತನದಲ್ಲಿ ಸಾಗಿಸುವುದು ಹೇಗೆ? ಎಂಬುದನ್ನು ಅರ್ಥ ಮಾಡಿಕೊಂಡು ಹಾಗೇ ಚಿನ್ನವನ್ನು ತಂದೆ ಎಂದು ಬಾಯಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.