ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ‘ಅಪ್ಪು’ (Appu) ಚಿತ್ರ ರೀ-ರಿಲೀಸ್ ಆಗಿದ್ದು, ಕ್ರೇಜಿ ಕ್ವಿನ್ ರಕ್ಷಿತಾ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ್ದಾರೆ.
ಅಪ್ಪು ಚಿತ್ರದ ನಾಯಕಿ ರಕ್ಷಿತಾ (Rakshita) ಸಿನಿಮಾ ವೀಕ್ಷಿಸಿ ಮಾತನಾಡಿದರು. ಈ ಸಿನಿಮಾ ಯೂತ್ ಲವ್ ಸ್ಟೋರಿ, ಈಗಲೂ ಕಥೆ ಹೊಸದಾಗಿದೆ ಎನ್ನುತ್ತಾ ನಟಿ ಭಾವುಕರಾಗಿದ್ದಾರೆ.
23 ವರ್ಷಗಳ ನಂತರ ‘ಅಪ್ಪು’ ಸಿನಿಮಾ ನೋಡುತ್ತಿದ್ದೇನೆ. ಈ ಸಿನಿಮಾ ಯೂತ್ ಲವ್ ಸ್ಟೋರಿ, ಈಗಲೂ ಕಥೆ ಹೊಸದಾಗಿದೆ. 23 ವರ್ಷದ ನಂತರ ಅಪ್ಪು ನನ್ನ ಪಕ್ಕ ನಿಂತು ಸಂದರ್ಶನ ಕೊಡ್ತಿಲ್ಲ ಅಂತ ಬೇಸರವಿದೆ. ಈನನ್ನ ಮಗನ ಜೊತೆ ಬಂದು ಸಿನಿಮಾ ನೋಡಿದೆ. ಅಭಿಮಾನಿಗಳ ಸಂಭ್ರಮ ಕಂಡು ನನಗೆ ಖುಷಿಯಾಯಿತು ಎಂದಿದ್ದಾರೆ. ಅಂದು ಅಪ್ಪಾಜಿ, ಶಿವಣ್ಣ ಜೊತೆ 100ನೇ ದಿನದ ಪ್ರದರ್ಶನದಲ್ಲಿ ಸಿನಿಮಾ ನೋಡಿದಾಗ ಕನಸು ನನಸಾಯಿತು ಅನಿಸಿತ್ತು. ಇವತ್ತಿಗೂ ಹಾಗೆ ಇದೆ ಅಪ್ಪು ಲವ್ ಸ್ಟೋರಿ ಎಂದಿದ್ದಾರೆ.