ಬೆಂಗಳೂರು: ಹೂಡಿಕೆ, ಸುರಕ್ಷತೆ, ಗಳಿಕೆ, ವಿಮಾ ರಕ್ಷಣೆ ಸೇರಿ ಹಲವು ಕಾರಣಗಳಿಗಾಗಿ ಹೆಚ್ಚಿನ ಜನ ಎಲ್ಐಸಿ ಪಾಲಿಸಿ ಮಾಡಿಸುತ್ತಾರೆ. ಆದರೆ, ಹೂಡಿಕೆ, ಗಳಿಕೆ, ವಿಮಾ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಲಾಭವಿರುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದೇ ಕಾರಣಕ್ಕಾಗಿ ಎಲ್ಐಸಿಯ ನ್ಯೂ ಎಂಡೋಮೆಂಟ್ ಪಾಲಿಸಿಯ (ಪಾಲಿಸಿ ಸಂಖ್ಯೆ 914) ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಏನಿದು ಪಾಲಿಸಿ? ಎಷ್ಟು ರಿಟರ್ನ್ಸ್ ಇದೆ ಎಂಬುದನ್ನು ಮುಂದೆ ಓದಿ.
ಎಲ್ಐಸಿಯ ನ್ಯೂ ಎಂಡೋಮೆಂಟ್ ಪಾಲಿಸಿಯ ಪ್ರಕಾರ, ನೀವು ಪ್ರತಿ ದಿನ 71 ರೂಪಾಯಿ ಅಥವಾ ಮಾಸಿಕ 2,130 ರೂಪಾಯಿ ಪ್ರೀಮಿಯಂ ಪಾವತಿಸಿದರೆ, ಮೆಚ್ಯೂರಿಟಿ ವೇಳೆಗೆ ನಿಮಗೆ 48.40 ಲಕ್ಷ ರೂ. ಸಿಗುತ್ತದೆ. ಎಲ್ಐಸಿಯ ಎಂಡೋಮೆಂಟ್ ಪಾಲಿಸಿ ಅನ್ವಯ, 12ರಿಂದ 35 ವರ್ಷಗಳವರೆಗೆ ಇದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನೀವು 35 ವರ್ಷಗಳವರೆಗೆ ಮಾಸಿಕ 2,130 ರೂ. ಪಾವತಿಸಿದರೆ 48.40 ಲಕ್ಷ ರೂ. ಸಿಗುತ್ತದೆ.
ವಯೋಮಿತಿ ಎಷ್ಟಿದೆ?
ಎಲ್ಐಸಿಯ ನ್ಯೂ ಎಂಡೋಮೆಂಟ್ ಪಾಲಿಸಿಯನ್ನು ಖರೀದಿಸಲು ಕನಿಷ್ಠ 8 ವರ್ಷ ಆಗಿರಬೇಕು ಹಾಗೂ ಗರಿಷ್ಠ 50 ವರ್ಷದೊಳಗಿನವರಾಗಿರಬೇಕು. ಇದಕ್ಕೂ ಮೊದಲು ಗರಿಷ್ಠ 55 ವರ್ಷಗಳ ಮಿತಿ ಇತ್ತು. ಆದರೆ, ಎಲ್ಐಸಿಯು ಇದನ್ನು 50 ವರ್ಷಗಳಿಗೆ ಇಳಿಕೆ ಮಾಡಿದೆ. ಎಂಡೋಮೆಂಟ್ ಪಾಲಿಸಿಯ ಕನಿಷ್ಠ ವಿಮಾ ಮೊತ್ತವು 1 ಲಕ್ಷ ರೂ. ಆಗಿದೆ. ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ಆದರೆ, ಕನಿಷ್ಠ 12 ವರ್ಷಗಳಿಂದ 35 ವರ್ಷಗಳಿಗೆ ಇದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಯಾವುದೇ ಖಾಸಗಿ ಕಂಪನಿಗಳ ಲೈಫ್, ಟರ್ಮ್ ಇನ್ಶೂರೆನ್ಸ್ ಬಗ್ಗೆ ಮಾಹಿತಿ ಇರದವರು, ರಿಸ್ಕ್ ಇಲ್ಲದೆ ಹೂಡಿಕೆ ಮಾಡಲು ಬಯಸುವವರಿಗೆ ಎಲ್ಐಸಿಯ ನ್ಯೂ ಎಂಡೋಮೆಂಟ್ ಪಾಲಿಸಿಯು ಉಪಯುಕ್ತವಾಗಲಿದೆ. ಗ್ರಾಮೀಣ ಭಾಗದ ಜನರಿಗೆ ಇದು ಹೆಚ್ಚು ಅನುಕೂಲಕರವಾಗಿದೆ.
ಗಮನಿಸಿ: ಎಲ್ಐಸಿಯ ನ್ಯೂ ಎಂಡೋಮೆಂಟ್ ಪಾಲಿಸಿ ಕುರಿತು ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ. ಈ ಪಾಲಿಸಿಯನ್ನೇ ಮಾಡಿಸಿ ಎಂದು ನಿಮಗೆ ಶಿಫಾರಸು ಮಾಡುವುದಿಲ್ಲ. ಎಲ್ಐಸಿ ಸೇರಿ ಯಾವುದೇ ಪಾಲಿಸಿ ಖರೀದಿ, ಹೂಡಿಕೆಗೆ ಮುನ್ನ ಪರಿಣತರ ಸಲಹೆ-ಸೂಚನೆ ಪಡೆಯುವುದು ಸುರಕ್ಷಿತ.