ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ (Gold Smuggling Case) ಪ್ರಕರಣದಲ್ಲಿ ಈಗಾಗಲೇ ರನ್ಯಾ ರಾವ್ ಅರೆಸ್ಟ್ ಆಗಿ ಜೈಲು ಸೇರಿದ್ದಾರೆ. ಇಂದು ಅವರ ಬೇಲ್ ಅರ್ಜಿಯ ವಿಚಾರಣೆ ಕೂಡ ಇದೆ. ಈ ಮಧ್ಯೆ ರನ್ಯಾ, ಬಗ್ಗೆ ಮತ್ತೊಂದು ವಿಷಯ ಸ್ಫೋಟವಾಗಿದೆ.
ಈ ವರ್ಷದ ಜನವರಿಯಿಂದ ಇಲ್ಲಿಯವರೆಗೂ ದುಬೈನಿಂದ ಭಾರತಕ್ಕೆ ಸುಮಾರು 38.98 ಕೆಜಿ ಚಿನ್ನ ಕಳ್ಳಸಾಗಣೆ ಆಗಿರುವುದು ಬೆಳಕಿಗೆ ಬಂದಿದೆ. ಈ ಚಿನ್ನವನ್ನು ಬೆಂಗಳೂರು ಮತ್ತು ಮುಂಬೈ ವಿಮಾನ ನಿಲ್ದಾಣಗಳಿಗೆ ತರಲಾಗಿದೆ ಎಂದು ತಿಳಿದುಬಂದಿದೆ.ಇದಕ್ಕಾಗಿ ಡಿಆರ್ ಐ ಅಧಿಕಾರಿಗಳು ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರಬಹುದು ಎಂಬ ಶಂಕೆ ಕೂಡ ಇದೆ. ಹೀಗಾಗಿಯೇ ಸಿಬಿಐ ತನಿಖೆ ನಡೆಸುವಂತೆ ಡಿಆರ್ ಐ ಪತ್ರ ಬರೆದಿದೆ.
ಕಸ್ಟಮ್ಸ್ ಅಧಿಕಾರಿಗಳ ಸಹಾಯವಿಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನ ಕಳ್ಳಸಾಗಣೆ ಸಾಧ್ಯವಿಲ್ಲ ಎಂಬುವುದು ಡಿಆರ್ ಐ ಅನುಮಾನವಾಗಿದೆ. ಹೀಗಾಗಿಯೇ ಸಿಬಿಐ ತನಿಖೆಗೆ ಮನವಿ ಮಾಡಿದೆ. ಸಿಬಿಐ ದಾಖಲಿಸಿರುವ ಎಫ್ಐಆರ್ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿರುವ ಕಸ್ಟಮ್ಸ್ ಅಧಿಕಾರಿಗಳು, ಬಂಧಿತ ಆರೋಪಿಗಳು, ಶಂಕಿತರು, ಉದ್ಯಮಿಗಳು, ಚಿನ್ನದ ವ್ಯಾಪಾರಿಗಳು ಹಾಗೂ ಅವರ ಕಚೇರಿಗಳ ಮೇಲೆ ದಾಳಿ ನಡೆಸಿದೆ.