ಬೆಂಗಳೂರು: ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧಿಯಾಗಿರುವ ಆರೋಪಿ ತರುಣ್ ರಾಜ್ ನ ಒಂದೊಂದೇ ಮುಖವಾಡ ಬಯಲಾಗುತ್ತಿದೆ.
ರನ್ಯಾ ಆಪ್ತ ಸ್ನೇಹಿತನಾಗಿದ್ದ ತರುಣ್ ರಾಜ್ ತೆಲುಗು ಸಿನಿಮಾದಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ. ಈತ ತೆಲುಗಿನಲ್ಲಿ ಮೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾನೆ. ಸಿನಿಮಾಗಾಗಿ ಈತ ತನ್ನ ಹೆಸರನ್ನು ತರುಣ್ ಕೊಂಡೂರು ರಾಜ್ ಎಂಬ ಹೆಸರನ್ನು ವಿರಾಟ್ ಕೊಂಡೂರು ರಾಜ್ ಅಂತ ಬದಲಾಯಿಸಿಕೊಂಡಿದ್ದಾನೆ.
ವಿರಾಟ್ ಕೊಂಡೂರು ರಾಜ್ ಅಂತ ಹೆಸರು ಬದಲಿಸಿಕೊಂಡು ಟಾಲಿವುಡ್ ಸಿನಿಮಾದಲ್ಲಿ ನಟಿಸಲು ಯತ್ನಿಸುತ್ತಿದ್ದ. ಎಲ್ಲರೊಂದಿಗೆ ವಿರಾಟ್ ಎಂದು ಗುರುತಿಸಿಕೊಂಡಿದ್ದ. ಪರಿಚಯಂ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾನೆ. 2018ರಲ್ಲಿ ತೆರೆ ಕಂಡಿದ್ದ ತೆಲುಗಿನ ಪರಿಚಯಂ ಸಿನಿಮಾದಲ್ಲಿ ಕೂಡ ನಾಯಕನಾಗಿ ನಟಿಸಿದ್ದಾನೆ. ಈ ಸಿನಿಮಾ ಮೂಲಕವೇ ನಟಿ ರನ್ಯಾ ಜೊತೆ ಸ್ನೇಹ ಬೆಳೆಸಿದ್ದಾನೆ. ಆ ನಂತರ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಸಿಂಡಿಕೇಟ್ ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ತರುಣ್ ಡಿಐರ್ ಐ ವಶದಲ್ಲಿದ್ದು, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.