ಬೆಂಗಳೂರು: ನಟಿ ರನ್ಯಾ ರಾವ್ ವಿರುದ್ಧ ಚಿನ್ನ ಕಳ್ಳ ಸಾಗಾಟ ಪ್ರಕರಣವನ್ನು ಸಿಐಡಿಗೆ ವಹಿಸಿದ್ದ ರಾಜ್ಯ ಸರ್ಕಾರ, ತನ್ನ ನಡೆಯಿಂದ ಹಿಂದಕ್ಕೆ ಸರಿದಿದೆ.
ಕಳೆದ ವಾರ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಾಟ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಆದರೆ, ರಾಜ್ಯ ಸರ್ಕಾರವೇ ಎಸಿಎಸ್ ಗೌರವ್ ಗುಪ್ತ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ತನಿಖೆ ನಡೆಸಲು ಎರಡು ದಿನಗಳ ಹಿಂದೆ ತೀರ್ಮಾನ ಮಾಡಿದ ಕಾರಣ, ಹಾಲಿ ಸಿಐಡಿ ತನಿಖೆಯನ್ನು ಹಿಂಪಡೆದುಕೊಂಡಿದೆ.