ತೆಲುಗಿನ ನಟ, ರಾಜಕಾರಣಿ ಪೋಸಾನಿ ಕೃಷ್ಣ ಮುರಳಿ, ಆತ್ಮಹತ್ಯೆ ಒಂದೇ ನನಗೆ ಮುಂದಿರುವ ದಾರಿ ಎಂದು ಜಡ್ಜ್ ಮುಂದೆ ಕಣ್ಣೀರು ಸುರಿಸಿದ್ದಾರೆಂದು ವರದಿಯಾಗಿದೆ.
ಅವಾಚ್ಯ ಶಬ್ದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತೆಲುಗಿನ ಜನಪ್ರಿಯ ನಟ, ರಾಜಕಾರಣಿ ಪೋಸಾನಿ ಕೃಷ್ಣ ಮುರಳಿ ಆಂಧ್ರ ಪೊಲೀಸರು ಬಂಧಿಸಿದ್ದರು. ಬಂಧನದ ಹಿಂದೆ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿದೆ. ಈಗ ನಟ, ರಾಜಕಾರಣಿ ಪೋಸಾನಿ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ. ಜಾಮೀನು ಸಿಗದ ಹಿನ್ನೆಲೆಯಲ್ಲಿ ಈ ಮಾತು ಹೇಳಿದ್ದಾರೆ ಎಂದು ವರದಿಯಾಗಿದೆ.
ಪೋಸಾನಿ ವೈಸಿಆರ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದರು. ಅಲ್ಲದೇ, ಅವರ ಪತ್ನಿ ಬಗ್ಗೆಯೂ ಕೀಳು ಹೇಳಿಕೆ ನೀಡಿದ್ದರು. ‘ಪವನ್ ಕಲ್ಯಾಣ್ ಪತ್ನಿಗೆ ಕೆಲಸದವರ ಜೊತೆ ಅಕ್ರಮ ಸಂಬಂಧ ಇದೆ. ಆಕೆ ವೇಶ್ಯೆ ಎಂದೆಲ್ಲ’ ಮುರುಳಿ ಹೇಳಿದ್ದರು. ಈಗ ಅವರನ್ನು ಬಂಧಿಸಲಾಗಿದೆ.
ಮುರಳಿ ಅವರ ಜಾಮೀನು ಅರ್ಜಿ ಗುಂಟೂರು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ಈ ವೇಳೆ ಅವರು ಜಡ್ಜ್ ಎದುರು ಕಣ್ಣೀರು ಹಾಕಿದ್ದಾರೆ. ‘ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಆಗಲಿ. ಆದರೆ ಈ ರೀತಿಯಲ್ಲಿ ಹಿಂಸೆ ಕೊಡಬಾರದು’ ಎಂದು ಕಣ್ಣೀರು ಸುರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಹಲವರು ಇದು ಸಿಂಪತಿ ಗಿಟ್ಟಿಸುವ ಸ್ಟಂಟ್. ಪವನ್ ಕಲ್ಯಾಣ್ ಹಾಗೂ ಚಂದ್ರಬಾಬು ನಾಯ್ಡು ಕುಟುಂಬದವರಿಗೆ ಪೋಸಾನಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಅವರಿಗೆ ತಕ್ಕ ಶಾಸ್ತಿ ಆಗಲಿ ಎಂದು ಹೇಳುತ್ತಿದ್ದಾರೆ.