ಬೆಂಗಳೂರು: ಮುಜರಾಯಿ ಇಲಾಖೆಯಿಂದ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯ ಹಾಗೂ ಬೇರೆ ರಾಜ್ಯಗಳ ದೇವಾಲಯಕ್ಕೆ ತೆರಳುವವರಿಗೆ ಮುಜರಾಯಿ ಇಲಾಖೆ (Muzrai Department) ಗುಡ್ ನ್ಯೂಸ್ ನೀಡಿದೆ. ದೇಗುಲದ ರೂಮ್ ಗಳ ಕುರಿತು ವೆಬ್ ಸೈಟ್ ನಲ್ಲಿ ಕುಳಿತಲ್ಲೇ ಮಾಹಿತಿ ತಿಳಿದುಕೊಳ್ಳಬಹುದು.
ಇದರಿಂದಾಗಿ ಹಬ್ಬ ಹಾಗೂ ವಿಶೇಷ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಹಬ್ಬದ ಸಂದರ್ಭದಲ್ಲಿ ರೂಮ್ ಗಳು ಫುಲ್ ರಷ್ ಆಗಿರುತ್ತವೆ. ಅಲ್ಲದೇ, ಹಲವರು ಇದನ್ನೇ ದಂಧೆ ಮಾಡಿಕೊಂಡು ಡಬಲ್, ತ್ರಿಬಲ್ ಹಣ ಪಡೆದು ರೂಮ್ ನೀಡುತ್ತಿರುತ್ತಾರೆ. ಇದಕ್ಕೆಲ್ಲ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯ ಹಾಗೂ ಹೊರರಾಜ್ಯದ ದೇಗುಲಕ್ಕೆ ಹೋಗುವ ಭಕ್ತಾದಿಗಳಿಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ ನೀಡಿದೆ.
ಬಜೆಟ್ ನಲ್ಲಿ ರಾಜ್ಯ ಸರ್ಕಾರ, ಮುಜರಾಯಿ ಹಾಗೂ ಧಾರ್ಮಿಕ ಧತ್ತಿ ಇಲಾಖೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಘೋಷಿಸಿದೆ. ರಾಜ್ಯದ ಭಕ್ತಾದಿಗಳಿಗೆ ಅನುಕೂಲವಾಗಲು ಕರ್ನಾಟಕ ದೇವಾಲಯಗಳ ವಸತಿ ಕೋಶವನ್ನು ನೀಡಲು ಧಾರ್ಮಿಕ ಧತ್ತಿ ಇಲಾಖೆ ಮುಂದಾಗಿದೆ. ಈ ಕೋಶದಂತೆ ವೆಬ್ ಸೈಟ್ ನಲ್ಲಿ ರಾಜ್ಯದ 400 ದೇವಾಲಯದ ಹಾಗೂ ಹೊರರಾಜ್ಯದ ಛತ್ರಗಳ ಅಂದಾಜು 3,500 ರೂಮ್ ಗಳ ಬುಕ್ಕಿಂಗ್ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯವಾಗಲಿದೆ. ಮುಜರಾಯಿ ದೇವಸ್ಥಾನಗಳಿಗೆ ತೆರಳುವ ಭಕ್ತರು, (https://karnatakatemplesaccommodation.com) ವೆಬ್‌ಸೈಟ್ ಗೆ ಭೇಟಿ ನೀಡಿ, ದೇವಾಲಯದ ರೂಮ್ ಗಳನ್ನು ಬುಕ್ ಮಾಡಬಹುದಾಗಿದೆ.