ಬೆಂಗಳೂರು: ರಾಜ್ಯದ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಚ್ ವಿರುದ್ಧ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಹೆಚ್. ತಮ್ಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಚ್, ಜಿಲ್ಲೆಯ ನಾಯಕರ ಸಭೆ ನಡೆಸಿದ್ದರು. ಸಭೆಯಲ್ಲಿ ಶಾಸಕ ತಮ್ಮಯ್ಯ, ನಮ್ಮ ಜಿಲ್ಲೆಗೆ ಬಜೆಟ್‌ನಲ್ಲಿ ಅನುದಾನ ಬಂದಿಲ್ಲ. ಈ ನಿಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯರ ಬಳಿ ನಿಯೋಗ ತೆಗೆದುಕೊಂಡು ಹೋಗಿ ಎಂದು ಆಗ್ರಹಿಸಿದ್ದಾರೆ.
ಅದಕ್ಕೆ ಜಾರ್ಚ್ ಅದನ್ನೆಲ್ಲಾ ನಾನು ಮಾಡುವುದಿಲ್ಲ. ಈಗ ಸಭೆ ಕರೆದಿರುವುದು ಕುಡಿಯುವ ನೀರಿನ ವಿಚಾರದ ಬಗ್ಗೆ. ಅದನ್ನು ಮಾತ್ರ ಮಾತನ್ನಾಡಿ ಎಂದಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ಶಾಸಕ ನೀವು ನಮ್ಮ ಬೆನ್ನಿಗೆ ನಿಲ್ಲಬೇಕು. ನೀವು ಅದನ್ನು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.