ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ ಗೆ ಈಗ ಐಟಿ ಶಾಕ್ ಕೂಡ ಎದುರಾಗುತ್ತಿದೆ.
ರನ್ಯಾ ಪ್ರಕರಣದಲ್ಲಿ ಎಂಟ್ರಿ ಕೊಡಲು ಈಗ ಐಟಿ ಕೂಡ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಈಗಾಗಲೇ ಈ ಗೋಲ್ಡ್ ಸ್ಮಗ್ಲಿಂಗ್ ತನಿಖೆಯನ್ನು ನಾಲ್ಕು ಸಂಸ್ಥೆಗಳು ನಡೆಸುತ್ತಿವೆ.
ಡಿಆರ್ ಐ, ಸಿಬಿಐ, ಸಿಐಡಿ ಹಾಗೂ ಐಎಎಸ್ ಅಧಿಕಾರಿ ತಂಡ ತನಿಖೆ ನಡೆಸುತ್ತಿವೆ. ಈಗ ಐಟಿ ಅಧಿಕಾರಿಗಳು ಕೂಡ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಈಗ ಐಟಿ ಅಧಿಕಾರಿಗಳು ರನ್ಯಾ ರಾವ್ ಮನೆಯಲ್ಲಿ ಸಿಕ್ಕ ನಗದು ಹಾಗೂ ಚಿನ್ನದ ಬಗ್ಗೆ ಮಾಹಿತಿ ಕೇಳಿದ್ದಾರೆ.
ಡಿಆರ್ ಐ ಅಧಿಕಾರಿಗಳು ದಾಳಿ ನಡೆಸಿದ್ದ ಸಂದರ್ಭದಲ್ಲಿ ನಟಿ ರನ್ಯಾ ರಾವ್ ಮನೆಯಲ್ಲಿ 2.67 ಕೋಟಿ ಲಿಕ್ವಿಡ್ ಕ್ಯಾಶ್, 2.06 ಕೋಟಿ ಮೌಲ್ಯದ ಚಿನ್ನದ ಆಭರಣ ಪತ್ತೆಯಾಗಿತ್ತು. ಈ ಕುರಿತು ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ನಗದು ಹಣವೇ 2.67 ಕೋಟಿ ರೂ. ಪತ್ತೆಯಾಗಿದ್ದರಿಂದಾಗಿ ಐಟಿ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದಾರೆ.
ಅಷ್ಟು ಪ್ರಮಾಣದ ನಗದು ಹಣ ಹೇಗೆ ಬಂತು? ಆದಾಯದ ಮೂಲ ಯಾವುದು? ಪತ್ತೆಯಾದ ಹಣಕ್ಕೆ ತೆರಿಗೆ ಕಟ್ಟಲಾಗಿದೆಯೇ? ಮನೆಯಲ್ಲಿ ಸಂಗ್ರಹವಾದ ಹಣ ಎಲ್ಲಿಂದ ಬಂತು? ಅಂತಾ ಐಟಿ ಅಧಿಕಾರಿಗಳು ತನಿಖೆ ನಡೆಸಲು ಮುಂದಾಗಿದ್ದಾರೆ.
ಈ ಬಗ್ಗೆ ಡಿಆರ್ ಐ ಅಧಿಕಾರಿಗಳ ಬಳಿ ಐಟಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ಹೀಗಾಗಿ ಆದಾಯದ ಮೂಲ, ತೆರಿಗೆ ಪಾವತಿ, ಹಣ ಸಂಗ್ರಹದ ಬಗ್ಗೆ ತನಿಖೆ ನಡೆಸಲು ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.