ಇನ್ನು ನಟಿ ರನ್ಯಾ ರಾವ್ ಅವರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಸುನಿಲ್‌ಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದಳು, ಅಂದರೆ ಏನು? ಈ ಮೊದಲು ಆಕೆ ದುಬೈಗೆ ಹೋಗಿ ಬಂದಿದ್ದಾಳೆ. ನೀವು ಈಗ ಆಕೆಯನ್ನು ಬಂಧಿಸಿದ್ದೀರಿ, ಸರಿ. ಆದ್ರೆ ಮೊದಲ ಬಾರಿಗೆ ಏನು ರನ್ಯಾ ಹೋಗಿರುವುದು. ಆಕೆ ಮೊದಲು ತಂದ ಗೋಲ್ಡ್ ಹಂಚಿಕೆ ಮಾಡುತ್ತಿದ್ದಳು.
ಬಳಿಕ ತನ್ನ ಶೇರ್ ತೆಗೆದುಕೊಂಡು ಹೋಗುತ್ತಿದ್ದಳು. ಹಾಗಾದ್ರೆ ಈಕೆ ತರುತ್ತಿದ್ದ ಗೋಲ್ಡ್ ಎಲ್ಲಿ ಹೋಯಿತು. ಅದೆಲ್ಲಾ ಹೋಗಿರುವುದು ಎಲ್ಲಿಗೆ? ಚಾಮರಾಜಪೇಟೆಗಾ? ಅಥವಾ ಸದಾಶಿವನಗರಕ್ಕಾ? ಎಂಬುದನ್ನು ಪ್ರಶ್ನಿಸಿದ್ದಾರೆ.