ದಕ್ಷಿಣದ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದಂತೂ ಸತ್ಯ. ಈ ಚಿತ್ರಕ್ಕೆ ದೇಶದಲ್ಲಿ ಅಷ್ಟೇ ಅಲ್ಲದೇ, ವಿದೇಶದಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಈ ಚಿತ್ರದ ಯಶಸ್ಸು ಸವಿದ ಚಿತ್ರ ತಂಡ, ಪುಷ್ಪದ ಮೂರನೇ ಅವತಾರವನ್ನು ಜನರಿಗೆ ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಅಲ್ಲು ಬಗ್ಗೆ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಅದನ್ನು ನಿಮಗೆ ಹೇಳ್ತೇವಿ ನೋಡಿ..
ನಿರ್ದೇಶಕ ಅಟ್ಲೀ ಕುಮಾರ್ ಅವರ ಮುಂದಿನ ಚಿತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹಬ್ಬಿದೆ. ಆದರೆ, ನಾವು ಹೇಳ ಹೊರಟಿರುವ ವಿಷಯ ಅದಲ್ಲ! ಅಲ್ಲು ಅರ್ಜುನ್ ಮತ್ತು ಅಟ್ಲೀ ಅವರ ಮುಂದಿನ ಚಿತ್ರದಲ್ಲಿ ಬರೋಬ್ಬರಿ ಐವರು ನಾಯಕಿಯರಂತೆ.
ಈ ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಪ್ರಮುಖ ಪಾತ್ರ ವಹಿಸಬಹುದು ಎನ್ನಲಾಗಿದೆ. ಇವರಲ್ಲದೆ, ಅಮೆರಿಕ ಮತ್ತು ಕೊರಿಯಾದ ಮೂವರು ಅಂತಾರಾಷ್ಟ್ರೀಯ ನಟಿಯರು ಬಣ್ಣ ಹಚ್ಚಲಿದ್ದಾರೆ. ಜಾನ್ವಿ ಜೊತೆಗೆ ಮತ್ತೋರ್ವ ಭಾರತೀಯ ನಟಿ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರ ಪುನರ್ಜನ್ಮದ ವಿಷಯ ಆಧರಿಸಿದೆ ಎಂಬ ಸುಳಿವು ನೀಡಿದೆ. ಅಲ್ಲು ಅರ್ಜುನ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ರಿವೀಲ್ ಆಗಿದ್ದು, ಚಿತ್ರ ತಂಡ ಮಾತ್ರ ಅಧಿಕೃತವಾಗಿ ಹೇಳಿಲ್ಲ. ಅಲ್ಲು ಅರ್ಜುನ್ ಐವರು ನಟಿಯರೊಂದಿಗೆ ಯಾವ ರೀತಿ ನಟಿಸಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಈಗಲೇ ಮೂಡಿದಂತಿದೆ. ಆದಷ್ಟು ಬೇಗ ಅಲ್ಲು ಅರ್ಜುನ್ ಅವರ ಈ ಕೃಷ್ಣನ ಅವತಾರ ತೆರೆಗೆ ಬರಲಿ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.