ಬೆಂಗಳೂರು: ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾದ -ವಿವಾದ ಶುರುವಾಗಿದೆ. ಬಿಜೆಪಿ ಅವಧಿಯಲ್ಲಿ ಗೋಲ್ಮ್ ಸ್ಮಗ್ಲಿಂಗ್ ಕಿಂಗ್ ಪಿನ್ ರನ್ಯಾ ಕಂಪನಿಗೆ 12 ಎಕರೆ ಜಾಗ ನೀಡಿರುವ ವಿಷಯ ಬಹಿರಂಗವಾಗುತ್ತಿದ್ದಂತೆ ಆರೋಪ- ಪ್ರತ್ಯಾರೋಪ ಜೋರಾಗಿದೆ. ಇದರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ವಿಜಯೇಂದ್ರಗೆ ದುಬೈ ನಂಟಿದೆ ಎಂದು ಹೇಳಿದ್ದಾರೆ. ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡದ ಬಗ್ಗೆ ಹೆಸರು ಇದ್ದರೆ ಹೇಳಲಿ. ಡಿಆರ್‌ಐ ಇದೆ. ಸಿಬಿಐ ಇದೆ. ಬಿಜೆಪಿ ರಾಜ್ಯಾಧ್ಯಕ್ಷರು ಇಬ್ಬರು ಸಚಿವರು ಎಂದಿದ್ದಾರೆ. ಹೆಸರು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ದುಬೈನಲ್ಲಿ ವಿಜಯೇಂದ್ರ ಅವರ ಸಾಕಷ್ಟು ದುಡ್ಡಿದೆ ಎಂದು ಯತ್ನಾಳ್ ಹೇಳುತ್ತಾರೆ. ವಿಜಯೇಂದ್ರ ದುಬೈಗೆ ಹೋಗುವುದು ಹಾಗೂ ಬರುವುದನ್ನು ಮಾಡುತ್ತಾರೆ. ಇದನ್ನು ಗಮನಿಸಿದರೆ, ವಿಜಯೇಂದ್ರಗೆ ಲಿಂಕ್ ಇರಬಹುದು ಎಂದು ಆರೋಪಿಸಿದ್ದಾರೆ.