ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಬ್ಯೂಟಿ, ನಟಿ ರನ್ಯಾ ಈಗಾಗಲೇ ಡಿಆರ್ ಐ ಅಧಿಕಾರಿಗಳ ಬೋನಿಗೆ ಬಿದ್ದಿದ್ದು, ಜೈಲು ಪಾಲಾಗಿದ್ದಾರೆ. ಈಗ ರನ್ಯಾ ಐಷಾರಾಮಿ ಬದುಕಿನ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಗಳು ಹೊರ ಬಿದ್ದಿವೆ.
ಸ್ಮಗ್ಲಿಂಗ್ ನಲ್ಲಿ ಸಿಲುಕಿಕೊಂಡಿರುವ ನಟಿ ರನ್ಯಾ ಐಷಾರಾಮಿ ಬದುಕು ಸಾಗಿಸುತ್ತಿದ್ದಳು ಎನ್ನಲಾಗಿದೆ. ಬೆಂಗಳೂರುಲ್ಲಿ ಕಾಸ್ಟ್ಲಿ ಏರಿಯಾದಲ್ಲಿ 4.5 ಲಕ್ಷ ರೂ. ಬಾಡಿಗೆ ಇರುವ ದುಬಾರಿ ಪ್ಲಾಟ್ ನಲ್ಲಿ ರನ್ಯಾ ತಂಗುತ್ತಿದ್ದರು. ದುಬೈಗೆ ಹೋದರೂ ಐಶಾರಾಮಿ ಜೀವನ ನಡೆಸುತ್ತಿದ್ದರು.
ದುಬೈಗೆ ಹೋದಾಗ ರನ್ಯಾ ಸ್ಟಾರ್ ಹೋಟೆಲ್ ನಲ್ಲೇ ಉಳಿದುಕೊಳ್ಳುತ್ತಿದ್ದರು. ದುಬೈನ ಗ್ರಾಂಡ್ ಹೊಟೇಲ್ ಗಳಲ್ಲಿ ಒಂದಾದ ಹಯಾತ್ ಗ್ರ್ಯಾಂಡ್ ಮತ್ತು ಎಸ್ ಎಲ್ ಎಸ್ ಹೋಟೆಲ್ ನಲ್ಲೇ ರನ್ಯಾ ವಾಸ್ತವ್ಯ ಹೂಡುತ್ತಿದ್ದಂತೆ ಅದರಲ್ಲೂ ರನ್ಯಾ ಮತ್ತು ತರುಣ್ ರಾಜು ಹಯಾತ್ ಹೋಟೆಲ್ ನಲ್ಲೇ ಹೆಚ್ಚಾಗಿ ಉಳಿದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಹಯಾತ್ ಹೋಟೆಲ್, ದುಬೈನಲ್ಲಿ ಅತೀ ದುಬಾರಿ ಹೋಟೆಲ್ ಗಳಲ್ಲಿ ಒಂದು. ಇದೇ ಹೋಟೆಲ್ ನಲ್ಲಿ ರನ್ಯಾ ಉಳಿದುಕೊಂಡು ಚಿನ್ನ ಖರೀದಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು ಎನ್ನಲಾಗಿದೆ. ಇದೇ ಹೋಟೆಲ್ ನಲ್ಲಿ ಸ್ವರ್ಗದಂತಹ ವಿಲಾಸಿ ಜೀವನ ನಡೆಸಿ, ಈಗ ಜೈಲು ಸೇರಿದ್ದಾರೆ. ಜೈಲಿನಲ್ಲಿ ಸಾಮಾನ್ಯ ಕೈದಿಗಳಂತೆ ಮುದ್ದೆ ಮುರಿಯುತ್ತಿದ್ದಾರೆ.