ಬೆಂಗಳೂರು: ರನ್ಯಾರಾವ್ ಗೋಲ್ಡ್ ಕೇಸ್ ಪ್ರಕರಣದಲ್ಲಿ ಇಬ್ಬರು ಸಚಿವರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಎಚ್ಚೆತ್ತುಕೊಂಡಿರುವ ಸರ್ಕಾರ, ತನಿಖೆಗೆ ಆದೇಶಿಸಿದೆ.
ಶಿಷ್ಟಾಚಾರದ ಸೌಲಭ್ಯ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಗೌರವ ಗುಪ್ತಾ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಒಂದು ವಾರದಲ್ಲೇ ವರದಿ ನೀಡಲು ಸೂಚನೆ ನೀಡಲಾಗಿದೆ. ಅಲ್ಲದೇ, ಡಿಜಿಪಿ ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ಕೂಡ ತನಿಖೆ ನಡೆಸುವಂತೆ ಸೂಚಿಸಲಾಗಿದೆ.
ಉನ್ನತಾಧಿಕಾರಿಗಳಿಗೆ ನೀಡಲಾಗಿರುವ ಶಿಷ್ಟಾಚಾರವನ್ನು ತಮ್ಮ ತಂದೆ ಹೆಸರು ಹೇಳಿಕೊಂಡು ರನ್ಯಾ ದುರ್ಬಳಕೆ ಮಾಡಿಕೊಂಡಿರುವ ಆರೋಪವಿದೆ. ಹೀಗಾಗಿ ಶಿಷ್ಟಾಚಾರದ ದುರ್ಬಳಕೆಗೆ ಕಾರಣಗಳು ಏನು? ಎಂಬುವುದರ ಕುರಿತು ತನಿಖೆಗೆ ಸೂಚಿಸಲಾಗಿದೆ.