ಬೆಂಗಳೂರು: ನಟ ರಕ್ಷಿತ್ ಶೆಟ್ಟಿ (Rakshit Shetty) ಉಡುಪಿಯ ಕಾಪು ಹೊಸ ಮಾರಿಗುಡಿಗೆ (Kapu Marigudi Temple) ಸೋಮವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹೊಸ ಮಾರಿಗುಡಿಯ ಮಾರಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಪೂಜೆ ಸಲ್ಲಿಸಿದ್ದಾರೆ. ರಕ್ಷಿತ್ ತಮ್ಮ ತಾಯಿಯೊಂದಿಗೆ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿಗೆ ಆಡಳಿತ ಮಂಡಳಿ ಗೌರವಿಸಿದೆ.
ಇತ್ತೀಚೆಗಷ್ಟೇ ಕಾಪು ಮಾರಿಗುಡಿಗೆ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್, ಸೂರ್ಯ ಕುಮಾರ್ ಯಾದವ್, ಪೂಜಾ ಹೆಗ್ಡೆ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭೇಟಿ ನೀಡಿ, ತಾಯಿಯ ದರ್ಶನ ಪಡೆದಿದ್ದಾರೆ. ಇದರ ಬೆನ್ನಲ್ಲೇ ಈಗ ರಕ್ಷಿತ್ ಶೆಟ್ಟಿ ಕೂಡ ದರ್ಶನ ಪಡೆದಿದ್ದಾರೆ.