ಬೆಂಗಳೂರು: ರಾಜ್ಯದಲ್ಲಿ ದಾಖಲೆಯ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ಧರಾಮಯ್ಯ ಇಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಇಂದು ಸಂಜೆ 6 ಘಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ಸಾಲು ಸಾಲು ವಿಚಾರಗಳು ಚರ್ಚೆಯಾಗಲಿವೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವುದರ ಬಗ್ಗೆ ಚರ್ಚೆ ಮಾಡುವುದರ ಜೊತೆಗೆ, ಮುಂದೆ ಸರ್ಕಾರ ನಡೆಸಬೇಕಾದ ರೀತಿ, ಶಾಸಕರಿಗೆ ಅನುದಾನ ಹಂಚಿಕೆ, ಕ್ಷೇತ್ರಾಭಿವೃದ್ಧಿಯ ಕಡೆ ನಿಗಾ, ಕಾಮಗಾರಿ ನಡೆಸಲು ಬೇಕಾದ ಅನುದಾನ, ಗ್ಯಾರೆಂಟಿಗಳನ್ನು ಮುಂದುವರೆಸಬೇಕಾದ ಅನಿವಾರ್ಯತೆ, ಸಂಪನ್ಮೂಲ ಕ್ರೂಢಿಕರಣ, ಇಲಾಖೆಗಳಿಗೆ ಕೊಟ್ಟಿರುವ ಟಾರ್ಗೆಟ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.